November 28, 2010



ಸೋನೆ ಮಳೆಯಲ್ಲಿ ನಿನ್ನ ಕಣ್ಣ ಸನ್ನೆಯದೇ ನೆನಪು ..
ಸೋಕುವ ತಂಗಾಳಿಯಲಿ ನಿನ್ನದೇ ಸುಂದರ ಕನಸು ..
ಸುತ್ತಮುತ್ತಲು ತುಂಬಿರುವ ಮಬ್ಬುಗತ್ತಲ್ಲಲ್ಲಿ ,ನಿನ್ನ ಬೆಚ್ಚನೆ ಒಲವಿನದೇ ಚಿಂತೆ ..
ಮಳೆಯ ಹನಿಗಳ ಬಿಂದುವಲ್ಲಿಯು ಕಾಣುತಿರುವುದು, ನಿನ್ನದೇ ಪ್ರತಿಬಿಂಬವಂತೆ..
ಪಾವನವಾಯಿತು ಪ್ರಕೃತಿ, ಮಳೆ ನೀರಲ್ಲಿ ತೋಯ್ದು ..
ನೂತನವಾಯಿತು ಮನವು , ನಿನ್ನ ನೆನಪಿನ ಹನಿಯಲ್ಲಿ ನೆನೆದು :) :)










November 14, 2010



ಮನದ ಭಾವಗಳಿಗೆ ನದಿಯೊಂದು ಬೇಕಿದೆ..
ಆ ನದಿ ಹರಿದು ಗೆಳೆಯನ ಮನ ಸೇರಬೇಕಿದೆ ..
ಕಲ್ಲು ಹೃದಯವ ಕರಗಿಸಬೇಕಿದೆ..
ಸ್ನೇಹದ ಸುಮವ ಅರಳಿಸಬೇಕಿದೆ ..

ಅಪನಂಬಿಕೆಯ ಕಳೆ ತೆಗೆದು..
ಅಕ್ಕರೆಯ ನೀರೆರೆದು..
ಅದ ಕಾಪಾಡುವ ಹೊಣೆ ನನ್ನದೇ ಆಗಿದೆ..

ಹೂವು ಅರಳಿ ಪರಿಮಳವ ಚೆಲ್ಲಿದಾಗ,
ಗೆಳೆಯನ ಕಣ್ಣಲಿ ಸಂತಸವದು ಮಿಂಚಿದಾಗ,
ನಾ ಕಂಡ ಕನಸೆಲ್ಲ ನನಸಾಗದೇ ಆಗ..
ನಾ ಕಂಡ ಕನಸೆಲ್ಲ ನನಸಾಗದೇ ಬೇಗ ? :) :)


ತುಂಬಾ ಕೆಲಸವಿದ್ದ ಕಾರಣ ಗೆಳೆಯರ ಬ್ಲಾಗ್ ಗಳಿಗೆ ಭೇಟಿನೀಡಲು ಆಗಲಿಲ್ಲ ..ನಿಮ್ಮ ಸಹಕಾರ ಹೀಗೆ ಇರಲಿ.

October 10, 2010



ಸಾಗರದ ಅಲೆ ನಾನು ..
ತಂಪು ತಂಗಾಳಿಯ ಗೆಳತಿಯು ..
ನಾವಿಬ್ಬರು ಕೂಡಿ ಆಡುತಿರಲು ,ಹುಣ್ಣಿಮೆಯ ಚಂದ್ರನಿಗೂ ಮುನಿಸು ..
ನಮ್ಮೊಡನೆ ಸೇರಲು ಪಾಪ ಅವನಿಗೂ ಮನಸು ..
ಸೇರಿಸಿಕೊಂಡು ಅವನನ್ನು ,ಆಡಲು ಹೊರಟರೆ ನಾವು ,ಚುಕ್ಕಿಗಳ ಕಣ್ಣಲಿ ನೀರು ..
ಎಲ್ಲರನ್ನು ಒಂದುಗೂಡಿಸಿ ,ಎಲ್ಲರ ಮನವೊಲಿಸಿ ಆಟ ಶುರು ಮಾಡುವುದರೊಳಗೆ,
ನಿಶೆಯು ಹೊರಟಿತು ತಾ ಮನೆಗೆ ,
ಕೊನೆಯಾಯ್ತು ಮೊದಲಾಗದ ಆಟ ಅಲ್ಲಿಗೆ !!


October 3, 2010

ಮನದ ನೂರು ಭಾವಕೆ ಅರ್ಥ ಹುಡುಕಲು ಹೋಗಿ ಮನ ತೊಳಲಾಡಿದೆ..
ಯಾವುದು ಸರಿಯೋ ಯಾವುದು ತಪ್ಪೋ ತಾ ಅರಿಯದೆ ಕೊರಗಿದೆ..
ಸರಿ ಇದ್ದರು ಆಡಿದ ಮಾತು, ಹೇಳಿದ ರೀತಿ ತಪ್ಪಾದರೆ ,ನೋವೆಂಬುದು ತಪ್ಪಿದಲ್ಲ..
ಎಷ್ಟು ಕಾಡಿ ಬೇಡಿದರು,ಎಷ್ಟು ಕ್ಷಮೆ ಕೇಳಿದರು,ಕಲ್ಲಾದ ಮನವು ಕರಗದಲ್ಲ..

ಏನು ಮಾಡಲಿ ನಾನು,ನಿನ್ನ ನೋಯಿಸಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ..
ಕಾಲನ ಆಟಕೆ ,ಬದುಕು ಕಲಿಸುವ ಪಾಠಕೆ ಯಾರನು ದೂರುವುದು ತರವಲ್ಲ..
ಒಮ್ಮೊಮ್ಮೆ ಅನಿಸುವುದು ಬದುಕೆಷ್ಟು ಕ್ಲಿಷ್ಟವು ಭಾವನೆಗಳಿಂದ..
ಆದರೆ ಮರು ಕ್ಷಣ ಮನ ನುಡಿವುದು ಭಾವಗಳಿರದೆ ಬದುಕೆಂಬುದಿಲ್ಲ, ಮರುಳೆ ಬದುಕೆಂಬುದಿಲ್ಲ !!


September 25, 2010



ಯಾರಿರಬಹುದು ಜೊತೆಯಲ್ಲಿ ನಮಗಾಗಿ ಅನುದಿನ ಅನುಕ್ಷಣ ..?
ತಂದೆ ತಾಯಿ , ಅಣ್ಣ ತಮ್ಮಂದಿರು , ಅಕ್ಕ ತಂಗಿಯರು , ಬಂಧುಗಳು , ಬಾಳ ಸಂಗಾತಿ ?
ಯಾರು ಇರಲಾರರು ಅನುಗಾಲ ಅಲ್ಲವೇ ?

ಇದಕೆಲ್ಲ ಮಿಗಿಲಾದ ಬಂಧವುಂಟು ,ಕ್ಷಣ ಕಾಲ ಅಗಲದ ಬಂಧುವುಂಟು..
ಅದರ ಹೆಸರೇ ಗೆಳೆತನ,ಅವರೇ ನಮ್ಮ ನಲ್ಮೆಯ ಗೆಳೆಯರು..

ಬಾಲ್ಯದ ಗೆಳತಿ, ಬದುಕಿನ ಜೊತೆಗಾತಿ ಆಗಬಲ್ಲಳು..
ಅಕ್ಕ- ತಂಗಿ ಏಕೆ ತಾಯಿ ಕೂಡ ಆಗಬಲ್ಲಳು ..
ಅದೇ ರೀತಿ ಗೆಳೆಯ ,ಅಣ್ಣನು-ತಮ್ಮನು ,ಗುರುವು ಅಲ್ಲದೆ ,
ಸಿಟ್ಟಾದಾಗ ಬಿಸಿ ತುಪ್ಪವು ಆಗಬಲ್ಲನು.. :)


ಏನಾದರೇನು ಏನೋದರೇನು..?
ಬೇಕು ನನಗೆ ನನ್ನ ಗೆಳೆಯರು ಗೆಳೆಯರಾಗಿಯೇ ಮರು ಜನ್ಮದಲ್ಲೂ ..
ಎಲ್ಲ ಬಂಧಕ್ಕಿಂತ, ಸ್ನೇಹ ಬಂಧವೇ ಹೆಚ್ಚು ನನಗೆ ಇಹ-ಪರದಲ್ಲೂ :) :)

ಇದರ ಅರ್ಥ ಬೇರೆ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲವೆಂದಲ್ಲ..
ಸಂಬಂಧಗಳಲ್ಲಿ ಗೆಳೆತನವು ಕೂಡಿದ್ದರೆ , ಅದು ತರುವ ಖುಷಿಗೆ ಸರಿಸಾಟಿಯೇ ಇಲ್ಲ :) :)






September 5, 2010



ಯಾರ ಮನದಲಿ ಏನುಂಟು ಬಲ್ಲವರಾರು ..
ನಗುವ ಮೊಗದಲಡಗಿರುವ ಭಾವ ಕಂಡವರಾರು ..
ಬರಿ ಮೇಲ್ನೋಟಕೆ ಸರಿ ಇದ್ದಾರೆ ಸಾಕೆ ಜನರು ..
ನಿಜ ಬಣ್ಣ ತಿಳಿದಾಗ ಅಪರಿಚಿತರಾಗರೇ ಅವರು ..


ಯಾರು ಹಿತವರು ನನಗೆ ಎಂದು ತಿಳಿಯ ಬಯಸಿದೆ ಮನ..
ತಿಳಿಯಲೆತ್ನಿಸಿ ತಾ ಸೋತು ಮರುಗಿದೆ ದಿನ..
ಇರುವರು ಗೆಳೆಯರು ಮನದಲಿ ಜೋಪಾನವಾಗಿ ..
ಆದರೆ ಕೆಲವು ದಾರಿಯಲಿ ನಮಗೆ ನಾವೇ ಅಲ್ಲವೇ ಇರಬಹುದು ಜೊತೆಯಾಗಿ ? :) :)





August 29, 2010



ಬದಲಾವಣೆ ಬೇಕಾಗಿದೆ ಮನಕೆ..
ಬದಲಾಗಲೇ ಬೇಕಾಗಿದೆ ನಾನು..
ಸುತ್ತ ಇರುವ ಸ್ಪರ್ಧೆಯ ನಡುವೆ ..
ಎದ್ದು ಓಡಬೇಕಾಗಿದೆ ನಾನು..
ಹಿಂದಕೆಳೆಯುವ ಜನರ ಹಿಮ್ಮೆಟ್ಟಿ , ಮುಂದೆ ಹೋಗಬೇಕಾಗಿದೆ ನಾನು..
ಇಷ್ಟವಿಲ್ಲದಿದ್ದರು ಸ್ಪರ್ಧೆಯು , ಕಷ್ಟಕೊಡುವವರ ಮಣಿಸಿ ಹೋರಾಡಲೇ ಬೇಕಿದೆ ನಾನು..!!
ಇರಲಿ ನಿಮ್ಮ ಪ್ರೋತ್ಸಾಹ ಹೀಗೆಯೇ ಎಂದು..
ಗೆಲ್ಲಲು ನಿಮ್ಮ ಜೊತೆಯು ಬೇಕು ಎಂದೆಂದೂ.. :) :)





August 22, 2010



ನಿನ್ನದೇ
ನೆನಪು ನಿನ್ನದೇ ಕನಸು ,
ನಿನ್ನದೇ ಬಿಂಬ ಕಣ್ಣ ತುಂಬಾ ..
ನೀ ಛಿದ್ರ ಮಾಡಿ ಹೋದ ಮನವೆಂಬ ಕನ್ನಡಿಯಲ್ಲಿ ..
ಎಲ್ಲಿ ನೋಡಿದರು ನಲ್ಲ ನಿನ್ನದೇ ಬಿಂಬ ..

ಎಷ್ಟು ಚಿಂತಿಸದರೇನು ಬಂತು ,ಬರುವವನಲ್ಲ ನೀ ಮತ್ತೆ ತಿರುಗಿ ..
ನಿಜವ ಒಪ್ಪಲಾರದ ಮನವಾಯ್ತು ಕಲ್ಲು ,ನಿನ್ನದೇ ನೆನಪಲ್ಲಿ ಮರುಗಿ ..
ಒಬ್ಬಂಟಿಯಾಗಿ ಇರಬಲ್ಲೇನೆ ನಾನು , ಎಂಬ ಸಂದೇಹವೇ ನಿನಗೆ ಗೆಳೆಯ ?
ಬಾಳ ಬಲ್ಲೆನು ನೀನಿರದೆ ಸುಖವಾಗಿ , ಬೇಕಾಗಿದೆ ಸ್ವಲ್ಪ ಸಮಯ ..!!

ಕಲ್ಲು ಬಂಡೆಯಾಗಿರುವ ಮನಕೆ ಬೇಕಿರುವುದು ಕೇವಲ ಸಹಾನುಭೂತಿಯಲ್ಲ..
ನಿನ್ನದು ಹುಸಿ ಪ್ರೀತಿಯೆಂಬ ನಿಜ ತಿಳಿದಾಯ್ತು ಬಹು ಬೇಗ,ಮುಂದಡಿಯಿಡಲು ನನಗೆ ಅಷ್ಟೇ ಸಾಕಲ್ಲ!



August 14, 2010



ಮನದಾಸೆಯ ಸುಮಕೆ,ಒಲವಿನ ನೀರೆರದವ..
ಅದು ಅರಳಿ ನಿಂತಾಗ ,ಕಾಲಲ್ಲಿ ಹೊಸಕಿ ಹೋದವ ..
ಬದುಕೆಂಬ ದೋಣಿಗೆ ನಾವಿಕನಾಗಿ ಇದ್ದವ ..
ನೀರ ಸೆಳವು ಜೋರಾದಾಗ ,ಒಂಟಿಯಾಗಿ ಬಿಟ್ಟು ನೀರಿಗೆ ಹಾರಿದವ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?

ನೂರೆಂಟು ಆಸೆಗಳ ಮನದೆ ತುಂಬಿ ..
ಅದು ನನಸಾಗುವ ಕಾಲಕೆ ಕಾಣದಂತೆ ಮಾಯವಾದವ ..
ಮತ್ತೆ ಬರುವೆನೆಂಬ ಹುಸಿ ಭರವಸೆಯ ಮನದೆ ನೆಟ್ಟು ..
ನಿನ್ನದೇ ನೆನಪಲಿ ಕೊರಗುವಂತೆ ಮಾಡಿದ ಇನಿಯ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?


ಎಂದು ಬರುವೆಯೋ ನೀನು ,ಕಾದು ಕುಳಿತಿಯೇ ನಾನು ..
ಬಂದಾಗ ಹೇಳದೆ ಹೋಗಬೇಡ..
ಇರದಿದ್ದರೂ ನೀ ನನ್ನ ಜೊತೆಗೆ ..
ಬರದಿದ್ದರು ಮನದ ಮನೆಗೆ ..
ಕಾಣಿಸಿ ಹೋಗು ನಲ್ಲ ಒಮ್ಮೆ ನನಗೆ ..


ಅತ್ತು ಚೀರುವುದಿಲ್ಲ ,ನಿನ್ನ ತಡೆಯುವುದಿಲ್ಲ ..
ತೊಡಕಾಗಿ ನಿಲ್ಲೇ ನಾ , ನಿನ್ನ ದಾರಿಗೆ ..
ಸುಮ್ಮನೆ ನೋಡುವೆನು ,ಶುಭ ಕೋರಿ ಕಳಿಸುವೇನು..
ತಿರುಗಿ ನೋಡೆನು ಗೆಳೆಯ ನಿನ್ನ ಕಡೆಗೆ.






August 8, 2010



ದಿನ ದಿನ ಓಡುವುದೆಷ್ಟು ಬೇಗ ..
ಕಾಲದ ಪರಿವೆ ಇಲ್ಲದಂತಾಗಿದೆ ಈಗ..
ಕಣ್ಮುಚ್ಚಿ ತೆಗೆಯುವುದರೊಳಗೆ, ಹೊಸದೊಂದು ದಿನ ತರುವ ಹೊಸದಾದ ಅವಕಾಶ ..
ರಾತ್ರಿಯಾದರೆ ಕಣ್ಮುಂದೆ ಕಳೆದು ಹೋದ ದಿನದ ಅವಶೇಷ ..
ಮೂಡಿ ಬರುವುದು ಮತ್ತೊಂದು ದಿನ ಸರಿ ಮಾಡಲು ಮಾಡಿದ ತಪ್ಪನೆಲ್ಲ ..
ಜಂಜಾಟ ನಡುವೆ ನಮ್ಮತನ ಎಲ್ಲಿ ಹೋಯ್ತೋ ದೇವನೇ ಬಲ್ಲ ?

July 18, 2010



ಸ್ನೇಹವೆಂಬ ಕಡಲ ಆಳ ಅಳೆಯುವುದೆಂದರೆ ..
ಬಾನ ಚುಕ್ಕಿಗಳ ಲೆಕ್ಕವಿಟ್ಟಂತೆ..
ಅಂಕೆಗೆ ಸಿಗದು ,ಶಂಕೆಗೆ ಜಾಗವಿರದು ..
ಸ್ನೇಹದಲ್ಲಿ ಯಾವುದೇ ಇತಿ -ಮಿತಿಗಳಿರುವುದಿಲ್ಲ..
ಸ್ನೇಹಿತರ ಕಾಳಜಿಗೆ ಯಾವುದೇ ಅಳತೆ -ಮಾಪನಗಳಿರುವುದಿಲ್ಲ ..
ದೂರವೆಷ್ಟೇ ಇದ್ದರು ,ಮಾತಾಡಿ ಎಷ್ಟೋ ದಿನಗಳಾಗಿದ್ದರು ..
ಮತ್ತೆ ಸಿಕ್ಕಾಗ ಅದೇ ಕಕ್ಕುಲತೆ ,ಅದೇ ಆತ್ಮೀಯತೆ ಇರುವುದು ..
ಕೇವಲ ಈ ಬಂಧದಲಿ , ಸ್ನೇಹ ಸಂಬಂಧದಲಿ :) :)





July 11, 2010

ನಂಬಿಕೆ



ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..
ನಂಬಿಕೆ ಎಂದರೆ ಒಬ್ಬರ ಮೇಲೆ ಮತ್ತೊಬ್ಬರಿಗಿರುವ ವಿಶ್ವಾಸ ಅಲ್ಲವೇ ?
ಬೇರೆಯವರ ಮೇಲೆ ನಮಗಿರುವ ನಂಬಿಕೆಗಿಂತ ,
ನಮ್ಮ ಮೇಲೆ ನಮಗಿರುವ ನಂಬಿಕೆ ದೊಡ್ಡದು ಅಲ್ಲವೇ ?
ಬಂಧಗಳಲ್ಲಿ ನಮಗಿರುವ ನಂಬಿಕೆಯ ಮೇಲೆ ಬಂಧುತ್ವ ಬೆಳೆಯುವುದು ಇಲ್ಲ ಅಳಿಯುವುದು ..
ನಂಬಿಕೆಯೇ ನಿನ್ನ ಗಳಿಸುವುದೆಷ್ಟು ಕಷ್ಟವೋ ,ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ ..
ಆದರೇನು ಮಾಡುವುದು ?
ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..!! :) :)







June 23, 2010



ಹಲವು
ಸಲ ಮಾತಿಗಿಂತ ಮೌನವೇ ಆಪ್ತ ..
ಮಾತಿನಲ್ಲಿ ಹೇಳಲಾಗದ ನೂರು ಭಾವಗಳಿಗೆ ಮೌನವೇ ಸೂಕ್ತ ..
ಒಂಟಿತನವನ್ನು ಅಪ್ಪಿಕೊಂಡ ಮನಕೆ..
ಮಾತಿನ ಹಂಗೇಕೆ ?

ಮಾತಿನ ಮೋಡಿ ಅರಿತವರೆ ಆದರು ನಾವೆಲ್ಲರೂ..
ಮೌನ ತರುವ ನೆಮ್ಮದಿಯ ಸುಖವ ಬೇಡವೆನ್ನುವವರಾರು ?
ಬಿರು ನುಡಿಯ ನೋವಿಗಿಂತ ..
ನಸುನಗುವ ಚೆಲುವು ಚಂದವಲ್ಲವೇ ..?
ದುಡುಕಿ ನುಡಿವ ಒರಟು ನುಡಿಗಳಿಗಿಂತ..
ಕ್ಷಮೆ ಕೇಳುವ ಕಣ್ಣ ಸನ್ನೆ ಒಳಿತಲ್ಲವೇ ?

ಮಾತಾಡಲು ಏನು ಇರದಿರುವಾಗ ,ಮೌನವೇ ನೀನೆ ನಮ್ಮ ಆತ್ಮೀಯ ಗೆಳೆಯ..
ತಿಳಿಯದೆ ಮಾತಾಡಿ ಒಡೆದ ಮನಸನ್ನು ಒಂದು ಮಾಡಲು,
ಮೌನವೇ ನೀ ಇರಲೇಬೇಕು ನಮ್ಮ ಸನಿಹ..







June 20, 2010



ಸ್ನೇಹವೆಂದರೆ ನಾಲ್ಕು ಸವಿ ಮಾತನಾಡಿ ಖುಷಿಪಡಿಸುವುದಷ್ಟೇ ಅಲ್ಲ ..
ನಗುವಾಗ ಜೊತೆಗಿದ್ದು , ದುಃಖ ಬಂದಾಗ ದೂರವಾಗುವುದಲ್ಲ ..
ಸ್ನೇಹಿತನ ಮನದ ಕಸಿವಿಸಿಯ ಅರಿತು ಅರಿಯದಂತೆ ನಟಿಸುವುದಲ್ಲ ..
ಕೆಲವೊಮ್ಮೆ ನೂರು ಮಾತಾಡಿ ಸಮಾಧಾನ ಮಾಡುವುದಕ್ಕಿಂತ ..
ಅವನ ಬಳಿಯಿದ್ದು ನಾನಿರುವೆ ನಿನ್ನ ಜೊತೆಯಾಗಿ ನಿನ್ನ ಎಲ್ಲ ಕಷ್ಟಗಳಲ್ಲಿ ಗೆಳೆಯ ಚಿಂತಿಸಬೇಡ ,
ಎಂಬ ನುಡಿಯು ತರುವ ಮನಸ್ಥ್ಯರ್ಯ ದೊಡ್ಡದಲ್ಲವೇ ..?





June 16, 2010



ಬಣ್ಣಗಳಿಂದ ತುಂಬಿದ ಬದುಕು ನಮ್ಮದು,
ಕಣ್ಮುಂದೆ ನೂರೆಂಟು ಚೆಂದದ ಬಣ್ಣಗಳು..
ಹಸಿರುಟ್ಟು ನಗುವ ಭೂಮಿತಾಯಿಯ ಮೆಚ್ಚದವರು ಉಂಟೆ ..
ಮುಂಜಾನೆ ಮಂಜನು ಹೊತ್ತು ನಗುವ ಮಲ್ಲಿಗೆಯ ಮೊಗ್ಗ ಇಷ್ಟ ಪಡದವರು ಉಂಟೆ..
ಇನ್ನು ಸಂಜೆ ಮುಳುಗುವ ಸೂರ್ಯ ಬಿಡಿಸುವ ಆಕಾಶದ ಚಿತ್ರವ ಮರೆಯಲಾಗುವುದೇ..
ಹೀಗೆ ವರ್ಣಿಸಲು ಹೊರಟರೆ ನೂರೆಂಟು ಬಣ್ಣಗಳುಂಟು ಅಲ್ಲವೇ ?
ಇವೆಲ್ಲ ಸೇರಿ , ಕೂಡಿ ಒಂದು ಅಮೋಘ ಬಣ್ಣವನ್ನು ನಮಗಾಗಿ ನೀಡಿದೆ ..
ಅದೇ ನಮ್ಮ ಬದುಕೆನ್ನುವ ಸುಂದರ ಬಣ್ಣ , ನಮ್ಮ ಬಾಳೆನ್ನುವ ಬಣ್ಣಿಸಲಾಗದ ಬಣ್ಣ :)



June 8, 2010


ಎಲ್ಲಿಂದ ಶುರು ಮಾಡಲಿ ನಿನ್ನ ಬಣ್ಣನೆಯ ಗೆಳೆಯ ..
ಮಾತುಗಳಲ್ಲಿ ಬಣ್ಣಿಸಬಲ್ಲೇನೆ ಆ ಮಧುರ ಬಂಧವನು..
ನಿನ್ನ ನೆನಪೊಂದೆ ಸಾಕು ನೂರಾನೆಯ ಬಲವಿದ್ದಂತೆ..
ನಿನ್ನ ಬಿಂಬವಿದ್ದಾಗ ಕಣ್ಣಲಿ ಎಲ್ಲಿ ಹೋದರು ನನ್ನದೇ ಗೆಲುವಂತೆ..

ನನ್ನ ಸಣ್ಣ ನೋವಿಗೂ ಮಿಡಿವ ನಿನ್ನ ಮನವ ನಾ ಅರಿಯಲೆಂತೋ,
ನನ್ನ ಪ್ರತಿಯೊಂದು ತಪ್ಪನು ಕ್ಷಮಿಸಿ ನಗುವಾಗ ನಿನ್ನ ಮುಗುಳ್ನಗೆ ತರುವ ಖುಷಿಯನು ನಾ ಮರೆಯಲೆಂತೋ ..
ಗೆಳೆತನದ ಅರ್ಥ ತಿಳಿಸಿದ ಸ್ನೇಹಿತ ಧನ್ಯವಾದಗಳು ನಿನಗೆ ..
ಇರಲಿ ಎಂದಿಗೂ ಎಂದೆಂದಿಗೂ ಈ ಸ್ನೇಹ ಸಂಬಂಧ ನಮ್ಮ ಜೊತೆಗೆ, ಜೊತೆ ಜೊತೆಗೆ :) :)





May 17, 2010



ಅಳುಕದು ಮೂಡಿ ಮನದಲಿ ..
ತಳಮಳ ತಂದಿತು ಬದುಕಲಿ ..
ಬಳಿ ಇರಲು ನೀನು, ನಾ ಏಕೆ ಭಯಪಡಬೇಕೆಂದುಕೊಂಡರೆ..
ನಿನ್ನ ರೂಪದಲ್ಲೇ ಎದುರಾಗಬೇಕೆ ತೊಂದರೆ ? ?

ನೀ ಎಷ್ಟು ಸಾಂತ್ವಾನ ಹೇಳಿದರು ,
ಒಪ್ಪಲೊಲ್ಲದು ಈ ಮನಸೇಕೋ ..
ಒಡೆದ ಕನ್ನಡಿಯ ಜೋಡಿಸಬಲ್ಲೆ ,
ಎನ್ನುವ ಈ ಹುಚ್ಚು ಛಲವೇಕೋ ??
ಬಂದದ್ದು ಬರಲಿ ಬಿಡು ನಾ ಎದುರಿಸುವೆ ಒಬ್ಬಂಟಿಯಾಗಿ ..
ನೀ ಇದ್ದರು ಇರದಿದ್ದರೂ ನನ್ನ ಜೊತೆಯಾಗಿ ..

ಹೋಗಲಿ ಬಿಡು ಕ್ಷಮಿಸುವೆ ನಾ ನಿನ್ನ ಸಣ್ಣ ತಪ್ಪನ್ನು..
ಕಣ್ಣಾರೆ ನೋಡಲಾರೆ ನಾ ನಿನ್ನ ನೋವನ್ನು..
ಹೇಳಿದಷ್ಟು ಸುಲಭವಲ್ಲ ಅಲ್ಲವೇ ಗೆಳೆಯ ನಿಜ ಸ್ನೇಹವ ತೊರೆಯಲು..
ಕಾಡುವುದು ಅದರ ಸವಿ ನೆನಪು ನಮ್ಮನ್ನು ಹಗಲಿರುಳು :) :)










May 2, 2010



ತಂಗಾಳಿಯ ತಂಪದು ತುಂಬಿರಲು ಮನದ ತುಂಬಾ..
ಎಲ್ಲಿ ನೋಡಿದರಲ್ಲಿ ಸ್ನೇಹದ ಪ್ರತಿಬಿಂಬ ...
ಸ್ನೇಹದ ಸಾಗರದಲ್ಲಿ ಹುದುಗಿರುವ ಮುತ್ತುಗಳು ಎನಿತೋ
ನನಗೂ ದೊರಕಿವೆ ಸ್ವಾತಿ ಮುತ್ತುಗಳು ಅದೆನಿತೋ ...
ಹೊಸ ಜನರ ನಡುವಲ್ಲಿ ಹೇಗೋ ಏನೋ ಎಂದು ಕಳವಳಪಡುತಿರುವಾಗ..
ನನಗೆ ಸಿಕ್ಕ ಅಮೂಲ್ಯ ಮುತ್ತು ರತ್ನಗಳಿವು ..
ಬೆಲೆ ಕಟ್ಟಲಾಗುವುದೇ ಸ್ನೇಹಿತರ ಸ್ನೇಹ ಪ್ರೀತಿಗಳಿಗೆ..
ಅವರ ಆತ್ಮಿಯ ನಡೆ ನುಡಿಗಳಿಗೆ :) :)







April 20, 2010

ಮುಖವಾಡ



ನೋವು ತುಂಬಿರಲು ನಿನ್ನ ಮನದಲಿ
ನಗುವ ಮುಖವಾಡ ಬೇಕೇ ನಿನಗೆ ಗೆಳೆಯ ,
ನಿನ್ನ ಮೌನವ ಓದಬಲ್ಲ ನನ್ನ ಕಣ್ಣಿಗೆ ..
ನಿನ್ನ ಮುಖವಾಡ ಒಂದು ತೊಡಕೆ ಇನಿಯ ..!!

ನಿನ್ನ ಕಣ್ಣ ಸನೆಯನ್ನೇ ನಂಬಿ ನಾ ಇರುವಾಗ ..
ನಿನ್ನ ನಲಿವನ್ನೇ ನನ್ನ ಗೆಲುವೆಂದು ತಿಳಿದಿರುವಾಗ ..
ಏಕೆ ಕೊಲ್ಲುವೆ ನೀ ಸುಮ್ಮನ್ನೇ ಮೌನದ ಮುಖವಾಡ ಧರಿಸಿ ..
ಬರಬಾರದೇ ನೀ ನನ್ನ ಬಳಿಗೆ ತಪ್ಪನೆಲ್ಲ ಕ್ಷಮಿಸಿ .. :)

April 11, 2010

ನೋಡಲು ಬನ್ನಿ ನಮ್ಮೂರ ..
ಎಲ್ಲಿ ನೋಡಿದರಲ್ಲಿ ಜನ ಸಾಗರ ..
ಧಾವಂತದ ಬದುಕಲ್ಲಿ ಸಿಗುವರು ಗೆಳೆಯರು ಬರಿ ವೀಕೆಂಡಿನಲ್ಲಿ ..
ಇನ್ನೆಲ್ಲ ದಿನ ಫೋನು ಎಸ್ಸಮಸ್ಸೇ ನಮಗೆ ಗತಿ ಇಲ್ಲಿ ..!!
ಏನು ಸುಖವಿದೆಯೋ ಈ ತರದ ಬದುಕಲ್ಲಿ ..
ಆದರು ಓಡುವ ಜನರ ಜೊತೆಯಲ್ಲಿ ಓಡಲೇ ಬೇಕು ನಾವಿಲ್ಲಿ ...!! :) :)


April 4, 2010



ನಿನ್ನ ನೆನಪು ತರುವ ಖುಷಿಯ ,ಇನ್ನೆಲ್ಲೂ ಕಾಣೆ ನಾ ಗೆಳೆಯ ..
ನಿನ್ನ ಮೊಗವ ನೆನೆದಾಗಲೆಲ್ಲ ಮನದಲೇನೋ ರೋಮಾಂಚನ ಇನಿಯ ...
ನಿನ್ನ ಸವಿ ನುಡಿಯ ಕೇಳಲೆಂದು ಕಾದು ಕೂತಿರುವೆ ನಾ ಉಸಿರ ಬಿಗಿಹಿಡಿದು ..
ಬರಬಾರದೇ ನೀ ಬೇಗ ನನ್ನ ಬಳಿಗೆ ಮಲ್ಲಿಗೆಯ ದಂಡೆಯನ್ನಿಡಿದು :) :)

March 14, 2010



ಕತ್ತಲಲ್ಲೂ ಕಾಣಬಲ್ಲೆ ನಾ ನಿನ್ನ ಮೊಗವನ್ನು ..
ಜನ ಜಂಗುಳಿಯಲ್ಲೂ ಕೇಳಬಲ್ಲೆ ನಾ ನಿನ್ನ ಪಿಸುನುಡಿಯನ್ನು..
ಸುಳಿದಾಡಿದೆ ನಿನ್ನ ಬಿಸಿಯುಸಿರು ನಾ ಇರುವಲೆಲ್ಲ ..
ನಿನ್ನ ಇರುವಿಕೆಯ ಕಂಡಿದೆ ಮನವು ಅನುದಿನವು ನಲ್ಲ ..
ಸಾಕು ಇನ್ನು ಈ ಹುಡುಗಾಟ ,ಬರಲಾರೆಯ ನೀ ಕಣ್ಣಮುಂದೆ ..
ಎಲ್ಲಿ ಹುಡುಕಲಿ ನಾ ನಿನ್ನ ,ಎಲ್ಲಿ ನೋಡಲಲ್ಲಿ ಕಂಡಿದೆ ಅಂದದ ಹುಡುಗರ ಮಂದೆ ;)

March 3, 2010



ಬೆಳಕ ಅರಸಿ ಹೊರಟಿದೆ ನನ್ನ ಈ ಮನವು ,
ಅದರ ಹಿಂದೆ ಬಹು ದೂರ ಸಾಗುತಿದೆ ತನುವು ,
ಗೆಲುವೆಂಬ ಬೆಳಕ ಕಾಣ ಹೊರಟಿದೆ ಈ ಕಣ್ಣು ..
ನಡೆವಷ್ಟು ದೂರ ಕಂಡಿದೆ ಕೇವಲ ಹೊಂಗಿರಣದ ಸುಳಿವು ..
ಪೂರ್ಣ ಬೆಳಕದು ಕಾಣುವುದೆಂದು ನಾನಂತೂ ಕಾಣೆ ಮನವೇ ..
ನಡೆಯುವೆ ಈ ಹಾದಿಯಲ್ಲಿ ನಾ ನಂಬಿಕೆಯ ದೀಪವನಿಡಿದು ..
ಎಣ್ಣೆ ಮುಗಿವ ಮುನ್ನ ತುಂಬು ಹೊಂಬೆಳಕೆ ನೀ ನನ್ನ ಮೊಗವನ್ನು ,ನನ್ನೀ ಸುಂದರ ಜಗವನ್ನು :) :)

February 21, 2010



ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರಂತೆ ..
ನಡೆಸುವ ಬಗೆಯ ಬದುಕೇ ನಮಗೆ ಕಲಿಸುವುದಂತೆ..
ಬಂದಾಗ ಬಿರುಗಾಳಿ ನಮ್ಮ ದಾರಿ ತಪ್ಪಿಸುವುದಂತೆ..
ಇರುವಾಗ ಅಲೆ ಶಾಂತ ಸುಲಭವಾಗಿ ದಡ ಸೇರಿಸುವುದಂತೆ..
ನೋವೇನು ನಲಿವೇನು ಚಲಿಸುವ ದೋಣಿಯಲ್ಲಿ ಎಲ್ಲವು ಕ್ಷಣಿಕ..
ಮಿತ್ರರೇನು ಶತ್ರುವೇನು ಅವನಿಗೆ ಅವನೇ ನಾವಿಕ..!!
ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರಂತೆ ..
ನಡೆಸುವ ಬಗೆಯ ಬದುಕೇ ನಮಗೆ ಕಲಿಸುವುದಂತೆ..!!

February 12, 2010


ಹೊಸ ಲೋಕ ,ಹೊಸ ಜೀವನ,
ಹೊಸದಾದ ಪರಿಸರ,
ಬದುಕೇ ಹೊಸದಾಗಿದೆ ಇದೀಗ..
ಎಲ್ಲ ಹೊಸತನದ ನಡುವೆ , ಇರಬೇಕು ನಾನು ನಾನಾಗಿ..
ಬದಲಾದ ಬದುಕಲ್ಲಿ ಅರಳಬೇಕಾಗಿದೆ ನಾ ಸುಂದರ ಸುಮವಾಗಿ :) :)

January 31, 2010

ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..



ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಮನದಲ್ಲಿರೆ ಗೆಲ್ಲುವೆನೆಂಬ ಛಲ ,
ಜೊತೆಗೂಡಿರೆ ನಂಬಿಕೆಯ ಬಲ ..
ಗೆಲುವದು ನಮ್ಮ ಮುಷ್ಟಿಯಲ್ಲಿ ..
ಖುಷಿಯದು ನಮ್ಮ ಕಂಗಳಲ್ಲಿ ..
ದಿನ ಕ್ಷಣದ ಚಿಂತೆಯೇಕೆ ನಮ್ಮ ಮನದಲ್ಲಿ ?
ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಈ ದಿನವೇ ನಮಗಾಗಿ , ಈ ಕ್ಷಣವೇ ನಮ್ಮ ಸುಖಕ್ಕಾಗಿ :) :)

January 25, 2010

ಬಂದಾಯ್ತು ಶುಭ ಗಳಿಗೆ ..



ಬಂದಾಯ್ತು ಶುಭ ಘಳಿಗೆ ..

ತಂದಾಯ್ತು ಸಿರಿ ಸುಖ ಮನಕೆ ..

ಕನಸೆಲ್ಲ ನಿಜವಾಯ್ತು ..

ನೋವೆಲ್ಲ ಕೊನೆಯಾಯಿತು ..

ಇರಲಿ ಖುಷಿ ಇಂದಿಗೂ , ಎಂದೆಂದಿಗೂ :)

January 10, 2010



ಮನದ ಬಾಗಿಲಲ್ಲಿ ನಿನಗಾಗಿ ಕಾದಿರುವೆ ನಾ ನಲ್ಲ ..
ಏನಿದೆ ನಿನ್ನ ಮನಸಿನಲಿ ಹೇಳು ಬೇಗ ನೀ ನನಗೆ..
ಬರಬಹುದೇ ಗೆಳೆಯ ನಾ ಒಳಗೆ ..
ಇಲ್ಲ ಹೊರಡಲೇ ಬೇಕೇ ನಿನ್ನನ್ನು ಅಗಲಿ ಬಹುದೂರಕೆ..!!
ಕಾಯಬಲ್ಲೆ ನಿನಗಾಗಿ ಇಲ್ಲೇ ಈ ಜನ್ಮವೆಲ್ಲ ..
ನೀ ಒಪ್ಪಿ ಕೂಗುವ ಆ ಒಂದು ಕೂಗಿಗೆ ನಲ್ಲ !!

January 3, 2010




ಸ್ನೇಹದ ರೆಕ್ಕೆ ಬೇಕಾಗಿದೆ ನನಗೆ ,
ಹೊತ್ತು ಹಾರಲು ನನ್ನ ಸ್ನೇಹಿತರನೆಲ್ಲ ...
ಪ್ರೀತಿಯ ಗೂಡು ಕಟ್ಟಬೇಕಾಗಿದೆ ನಾನು ,
ಬೇಕಲ್ಲ ನಮೆಗೆಲ್ಲ ಇರಲು ಒಂದು ಅಂದದ ತಾವು ..
ವಾತ್ಸಲ್ಯದ ಜೊತೆಗೆ ಬೇಕು ನಮಗೆ ಆತ್ಮೀಯತೆಯ ಗುಟುಕು ..
ನಮ್ಮ ಗೂಡಲಿ ಶಾಂತಿಯ ಮಂತ್ರ ನಲಿದಾಡಬೇಕು .. :)