September 25, 2010



ಯಾರಿರಬಹುದು ಜೊತೆಯಲ್ಲಿ ನಮಗಾಗಿ ಅನುದಿನ ಅನುಕ್ಷಣ ..?
ತಂದೆ ತಾಯಿ , ಅಣ್ಣ ತಮ್ಮಂದಿರು , ಅಕ್ಕ ತಂಗಿಯರು , ಬಂಧುಗಳು , ಬಾಳ ಸಂಗಾತಿ ?
ಯಾರು ಇರಲಾರರು ಅನುಗಾಲ ಅಲ್ಲವೇ ?

ಇದಕೆಲ್ಲ ಮಿಗಿಲಾದ ಬಂಧವುಂಟು ,ಕ್ಷಣ ಕಾಲ ಅಗಲದ ಬಂಧುವುಂಟು..
ಅದರ ಹೆಸರೇ ಗೆಳೆತನ,ಅವರೇ ನಮ್ಮ ನಲ್ಮೆಯ ಗೆಳೆಯರು..

ಬಾಲ್ಯದ ಗೆಳತಿ, ಬದುಕಿನ ಜೊತೆಗಾತಿ ಆಗಬಲ್ಲಳು..
ಅಕ್ಕ- ತಂಗಿ ಏಕೆ ತಾಯಿ ಕೂಡ ಆಗಬಲ್ಲಳು ..
ಅದೇ ರೀತಿ ಗೆಳೆಯ ,ಅಣ್ಣನು-ತಮ್ಮನು ,ಗುರುವು ಅಲ್ಲದೆ ,
ಸಿಟ್ಟಾದಾಗ ಬಿಸಿ ತುಪ್ಪವು ಆಗಬಲ್ಲನು.. :)


ಏನಾದರೇನು ಏನೋದರೇನು..?
ಬೇಕು ನನಗೆ ನನ್ನ ಗೆಳೆಯರು ಗೆಳೆಯರಾಗಿಯೇ ಮರು ಜನ್ಮದಲ್ಲೂ ..
ಎಲ್ಲ ಬಂಧಕ್ಕಿಂತ, ಸ್ನೇಹ ಬಂಧವೇ ಹೆಚ್ಚು ನನಗೆ ಇಹ-ಪರದಲ್ಲೂ :) :)

ಇದರ ಅರ್ಥ ಬೇರೆ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲವೆಂದಲ್ಲ..
ಸಂಬಂಧಗಳಲ್ಲಿ ಗೆಳೆತನವು ಕೂಡಿದ್ದರೆ , ಅದು ತರುವ ಖುಷಿಗೆ ಸರಿಸಾಟಿಯೇ ಇಲ್ಲ :) :)






6 comments:

ಸವಿಗನಸು said...

ಗೆಳೆತನದ ನಿಜ ಅರ್ಥ ಬಿಂಬಿಸುವ ಕವನ ಸೂಪರ್...

Subrahmanya said...

ಒಳ್ಳೆಯ ಆಶಯಗಳು..ತುಂಬ ಸಹಜವಾಗಿ ಮೂದಿಬಂದಿದೆ.

Unknown said...

ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದು ಅನ್ನೋದು ಇದ್ದೆ ಇರುತ್ತೆ... ಒಳ್ಳೆ ಸಂಬಂಧಿಕರು--ಒಳ್ಳೆ ಗೆಳೆಯರು... ಕೆಟ್ಟ ಗೆಳೆಯರು-ಕೆಟ್ಟ ಸಂಬಂಧಿಕರು... ಎಲ್ಲವೂ ಅವರು ಇರುವಂತೆ , ನಾವು ಇಟ್ಟುಕೊಂಡಂತೆ...

ಪ್ರಗತಿ ಹೆಗಡೆ said...

nice...

ಮನಸಿನಮನೆಯವನು said...

ಹೆಂಡ್ರು ಮಕ್ಳಿರುವರು ತಮ್ಮ
ಎಲ್ಲಿತನಕ !೨!
ಇದ್ರೆ ತಿಮ್ಬೋ ತನಕ !೨!
ಸತ್ತಾಗ ಬರುವರು ತಮ್ಮ ಕುಳಿತನಕ !೨!
ಮಣ್ಣು ಮುಚ್ಚೋ ತನಕ!೨!

ಅಣ್ಣ ತಮ್ಮ ಅಕ್ಕ ತಂಗಿ
ಎಲ್ಲಿತನಕ !೨!
ಬದುಕಿ ಬೆಳೆಯೋ ತನಕ!೨!
ಸತ್ತಾಗ ಬರುವರು ತಮ್ಮ ಕುಳಿತನಕ !೨!
ಮಣ್ಣು ಮುಚ್ಚೋ ತನಕ!೨!


ಸ್ನೇಹವೇ ನನ್ನುಸಿರು" ಎಂಭ ಭಾವ ನಿಮ್ಮ ಕವನದಲ್ಲಿದೆ...
ಸ್ನೇಹವೇ ಇಲ್ಲವೇ..?

ಸೀತಾರಾಮ. ಕೆ. / SITARAM.K said...

ಮನ ಚೊಕ್ಕವಿದ್ದರೆ ಎಲ್ಲದರಲ್ಲಿ ಸ್ನೇಹ, ಸ್ನೇಹದಲ್ಲಿ ಎಲ್ಲಾ ಸಂಭಂಧಗಲಿರ್ರುತ್ತವೆ. ಚೆಂದದ ಕವನ.