October 3, 2010

ಮನದ ನೂರು ಭಾವಕೆ ಅರ್ಥ ಹುಡುಕಲು ಹೋಗಿ ಮನ ತೊಳಲಾಡಿದೆ..
ಯಾವುದು ಸರಿಯೋ ಯಾವುದು ತಪ್ಪೋ ತಾ ಅರಿಯದೆ ಕೊರಗಿದೆ..
ಸರಿ ಇದ್ದರು ಆಡಿದ ಮಾತು, ಹೇಳಿದ ರೀತಿ ತಪ್ಪಾದರೆ ,ನೋವೆಂಬುದು ತಪ್ಪಿದಲ್ಲ..
ಎಷ್ಟು ಕಾಡಿ ಬೇಡಿದರು,ಎಷ್ಟು ಕ್ಷಮೆ ಕೇಳಿದರು,ಕಲ್ಲಾದ ಮನವು ಕರಗದಲ್ಲ..

ಏನು ಮಾಡಲಿ ನಾನು,ನಿನ್ನ ನೋಯಿಸಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ..
ಕಾಲನ ಆಟಕೆ ,ಬದುಕು ಕಲಿಸುವ ಪಾಠಕೆ ಯಾರನು ದೂರುವುದು ತರವಲ್ಲ..
ಒಮ್ಮೊಮ್ಮೆ ಅನಿಸುವುದು ಬದುಕೆಷ್ಟು ಕ್ಲಿಷ್ಟವು ಭಾವನೆಗಳಿಂದ..
ಆದರೆ ಮರು ಕ್ಷಣ ಮನ ನುಡಿವುದು ಭಾವಗಳಿರದೆ ಬದುಕೆಂಬುದಿಲ್ಲ, ಮರುಳೆ ಬದುಕೆಂಬುದಿಲ್ಲ !!


6 comments:

Kirti said...

nijavaagiyu nimm manadaalad dukh sariyaagide. sundar kavan bhaavad miditagal kavan.. chennagide

Creativity said...

ಸುಮ, ಬಹಳ ಸುಂದರವಾದ ಸಾಲುಗಳೊಂದಿಗೆ ಮಾತುಗಳಿಂದ ಉಂಟಾಗುವ ಮನಸಿನ ಆಗಾಥ, ನೋವು ತುಂಬಾ ಚೆನ್ನಾಗಿ ವರ್ನಿಸ್ಹಿಧೀಯ :) :)

ಸವಿಗನಸು said...

ಮನದ ಭಾವಕ್ಕೆ ಅರ್ಥ ಹುಡುಕುವುದು ಕಷ್ಟಾನೇ...?
ಚೆನ್ನಾಗಿದೆ...

ಸೀತಾರಾಮ. ಕೆ. / SITARAM.K said...

ಶೀರ್ಶಿಕೆಯಿಲ್ಲದ ಕವನ ಚೆನ್ನಾಗಿದೆ!
ಜೀವನವೊಂದು ಭಾವಯಾನ.
ಅರ್ಥ ಅನರ್ಥಗಳು ವಿಧಿನಿಯಮ.
ತಲೆಗೊಡದೆ ಮನದ ಓಟದಲ್ಲಿರು .....
ಚೆನ್ನಾಗಿದೆ ಸಾರ.

ಅನಂತ್ ರಾಜ್ said...

ಬದುಕು ಕಲಿಸುವ ಪಾಠ ಎ೦ಬ ಶೀರ್ಷಿಕೆಯನ್ನು ಕೊಡಬಹುದು ಅನ್ನಿಸುತ್ತೆ...! ಸು೦ದರ ಸಾಲುಗಳು ಮನಮುಟ್ಟಿದವು.

ಶುಭಾಶಯಗಳು
ಅನ೦ತ್

Snow White said...

ella geleyarigu nanna dhanyavadagalu :)
yavagalu barutta iri.. :)