ಬಣ್ಣಗಳಿಂದ ತುಂಬಿದ ಬದುಕು ನಮ್ಮದು,
ಕಣ್ಮುಂದೆ ನೂರೆಂಟು ಚೆಂದದ ಬಣ್ಣಗಳು..
ಹಸಿರುಟ್ಟು ನಗುವ ಭೂಮಿತಾಯಿಯ ಮೆಚ್ಚದವರು ಉಂಟೆ ..
ಮುಂಜಾನೆ ಮಂಜನು ಹೊತ್ತು ನಗುವ ಮಲ್ಲಿಗೆಯ ಮೊಗ್ಗ ಇಷ್ಟ ಪಡದವರು ಉಂಟೆ..
ಇನ್ನು ಸಂಜೆ ಮುಳುಗುವ ಸೂರ್ಯ ಬಿಡಿಸುವ ಆಕಾಶದ ಚಿತ್ರವ ಮರೆಯಲಾಗುವುದೇ..
ಹೀಗೆ ವರ್ಣಿಸಲು ಹೊರಟರೆ ನೂರೆಂಟು ಬಣ್ಣಗಳುಂಟು ಅಲ್ಲವೇ ?
ಇವೆಲ್ಲ ಸೇರಿ , ಕೂಡಿ ಒಂದು ಅಮೋಘ ಬಣ್ಣವನ್ನು ನಮಗಾಗಿ ನೀಡಿದೆ ..
ಅದೇ ನಮ್ಮ ಬದುಕೆನ್ನುವ ಸುಂದರ ಬಣ್ಣ , ನಮ್ಮ ಬಾಳೆನ್ನುವ ಬಣ್ಣಿಸಲಾಗದ ಬಣ್ಣ :)
12 comments:
ಇಂತಹ ಭಾವ ತುಂಬಿದ ಕವನ ಮೆಚ್ಚದವರು ಉಂಟೆ....
ಚೆಂದದ ಕವನ....
ಎಂತಹ ಸುಂದರ ಸತ್ಯವನ್ನು ಕವನದಲ್ಲಿ ಹೇಳಿದಿರಿ. ಪ್ರತಿಯೊಬ್ಬರಲಲ್ಲೂ ಬದುಕನ್ನು ಸುಂದರವಾಗಿಸಿಕೊಳ್ಳುವ ಹಂಬಲ ಕೊಡುವಂತಿದೆ ನಿಮ್ಮ ಕವನ. ತುಂಬ ಇಷ್ಟವಾಯಿತು.
ಬಹಳ ಸುಂದರವಾಗಿದೆ ಸುಮ......ಬಾಳಿನ ಜೀವನದ ರಂಗವನ್ನು ಬಹಳ ಅತ್ಹ್ಯುತಮ ವಾಗಿ ವರ್ಣಿಸಿದ್ದೀಯ
ಬದುಕಿನ ಬಣ್ಣವನ್ನು ತಾವು ಬಣ್ಣಿಸುವ ಪರಿಗೆ ಬಹು ಸ೦ತಸವಾಯಿತು. ಚೆ೦ದದ ಕಿರುಗವನ.
ಬದುಕಿನ ಬಣ್ಣದ ಕವನವನ್ನು ಚೆನ್ನಾಗಿ ಬಣ್ಣಿಸಿದ್ದಿರ...ತುಂಬಾ ಚೆನ್ನಾಗಿ ಅರ್ಥ ದಿಂದ ಕೂಡಿದೆ ಕವನ.....
ಮುದುವರಿಸಿ ...
Satya.. Neevu heliddu satya.. Banna nanna olavina banna, nanna badukina banna!!
Good one
keep going
ಸುಂದರ ಬಣ್ಣಕ್ಕೆ ಬಣ್ಣನೆ ಬೇಕೇ!?
ಚೆನ್ನಾಗಿದೆ... ಬದುಕೇ ಹಾಗೆ ಬಣ್ಣ ಬಣ್ಣದ ಚಿತ್ತಾರಗಳು
pratikrihisida ellarigu nanna dhanyavadagalu.. :)nimmellara prothsaha heege nanna mele irali endu praarthisuttene..
yavagalu barutta iri :)
Yes madam.. Life is Colorful :)
Nice One :)
thanks shivu sir :)
Post a Comment