June 23, 2010



ಹಲವು
ಸಲ ಮಾತಿಗಿಂತ ಮೌನವೇ ಆಪ್ತ ..
ಮಾತಿನಲ್ಲಿ ಹೇಳಲಾಗದ ನೂರು ಭಾವಗಳಿಗೆ ಮೌನವೇ ಸೂಕ್ತ ..
ಒಂಟಿತನವನ್ನು ಅಪ್ಪಿಕೊಂಡ ಮನಕೆ..
ಮಾತಿನ ಹಂಗೇಕೆ ?

ಮಾತಿನ ಮೋಡಿ ಅರಿತವರೆ ಆದರು ನಾವೆಲ್ಲರೂ..
ಮೌನ ತರುವ ನೆಮ್ಮದಿಯ ಸುಖವ ಬೇಡವೆನ್ನುವವರಾರು ?
ಬಿರು ನುಡಿಯ ನೋವಿಗಿಂತ ..
ನಸುನಗುವ ಚೆಲುವು ಚಂದವಲ್ಲವೇ ..?
ದುಡುಕಿ ನುಡಿವ ಒರಟು ನುಡಿಗಳಿಗಿಂತ..
ಕ್ಷಮೆ ಕೇಳುವ ಕಣ್ಣ ಸನ್ನೆ ಒಳಿತಲ್ಲವೇ ?

ಮಾತಾಡಲು ಏನು ಇರದಿರುವಾಗ ,ಮೌನವೇ ನೀನೆ ನಮ್ಮ ಆತ್ಮೀಯ ಗೆಳೆಯ..
ತಿಳಿಯದೆ ಮಾತಾಡಿ ಒಡೆದ ಮನಸನ್ನು ಒಂದು ಮಾಡಲು,
ಮೌನವೇ ನೀ ಇರಲೇಬೇಕು ನಮ್ಮ ಸನಿಹ..







9 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚೆನ್ನಾಗಿದೆ.
ಮೌನವೇ..ಮಾನವನಾಗುವ ಸಾಲುಗಳು..
ಚೆನ್ನಾಗಿ ಮೂಡಿಬಂದಿದೆ.

ಮನಸು said...

ಮೌನ ಬೇಕು ಅನ್ನಿಸುತ್ತೆ......ಕೆಲವೊಮ್ಮೆ ಮಾತು ಬೇಸರವಾದಗ ಮೌನ ನಮ್ಮ ಸಾತ್ ನೀಡುತ್ತೆ......... ಕವನ ಚೆನ್ನಾಗಿದೆ ಇಷ್ಟವಾಯಿತು

ಸವಿಗನಸು said...

ಮಾತು ಬೆಳ್ಳಿ...ಮೌನ ಬಂಗಾರ....
ಮಾತಿಗಿಂತ ಮೌನವೆ ಸರಿ ಅಂತ ಚೆನ್ನಾಗಿ ಹೇಳಿದೆ ಕವನ....

ಸುಮ said...

ತುಂಬ ಚೆನ್ನಾಗಿವೆ ಸಾಲುಗಳು. ಮೌನ ಕೂಡ ಅನೇಕ ಅರ್ಥ ಹೊಮ್ಮಿಸುವುದು ನಿಜ . ನನಗೂ ಮೌನ ಹೆಚ್ಚು ಪ್ರಿಯ .

ಸೀತಾರಾಮ. ಕೆ. / SITARAM.K said...

ಮಾತು ಬೆಳ್ಳಿ ! ಮೌನ ಬಂಗಾರ ಅಂದಿದ್ದು ಇದಕ್ಕೆ ಏನೋ?
ಕಣ್ಣ ಸನ್ನೆಯಲ್ಲಿನ ಸಂಭಾಷಣೆ ಮಧುರ ಅಲ್ಲವೇ!
ಮೌನದಲ್ಲಿನ ಹರವು ಮಾತನ್ನು ಚೆನ್ನಾಗಿ ಹರವಿದ್ದಿರಾ ಕವನದಲ್ಲಿ!

Raghu said...

ಮೌನಿಯಾಗಿ ಸಾಗ್ತಾ ಇದ್ದಾರೆ..ನೆನಪುಗಳ ದಾರಿ ಆದಾಗಿಯೇ ತೆರೆಯುತ್ತೆ.
ಚೆನ್ನಾಗಿದೆ.
ನಿಮ್ಮವ,
ರಾಘು.

shridhar said...

ಕೆಲವೊಮ್ಮೆ ಮೌನವೂ ಮಾತಾಗುತ್ತದೆ ..
ಕವನ ಚೆನ್ನಾಗಿದೆ ....

ನಮ್ಮ ಕಡೆನೂ ಒಮ್ಮೆ ಬನ್ನಿ
ಶ್ರೀಧರ ಭಟ್ಟ

ಶಿವಪ್ರಕಾಶ್ said...

ಮೌನವೇ ಮಾತಾದಾಗ ಮಾತೇಕೆ...?

Nice one :)

Snow White said...

nimma anisekegallannu tilisida ella snehitarigu tumba dhanyavadagalu :)yavagalu barutta iri :)nimma prothsaha nanna mele heege irali :)

Suma