July 11, 2010

ನಂಬಿಕೆ



ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..
ನಂಬಿಕೆ ಎಂದರೆ ಒಬ್ಬರ ಮೇಲೆ ಮತ್ತೊಬ್ಬರಿಗಿರುವ ವಿಶ್ವಾಸ ಅಲ್ಲವೇ ?
ಬೇರೆಯವರ ಮೇಲೆ ನಮಗಿರುವ ನಂಬಿಕೆಗಿಂತ ,
ನಮ್ಮ ಮೇಲೆ ನಮಗಿರುವ ನಂಬಿಕೆ ದೊಡ್ಡದು ಅಲ್ಲವೇ ?
ಬಂಧಗಳಲ್ಲಿ ನಮಗಿರುವ ನಂಬಿಕೆಯ ಮೇಲೆ ಬಂಧುತ್ವ ಬೆಳೆಯುವುದು ಇಲ್ಲ ಅಳಿಯುವುದು ..
ನಂಬಿಕೆಯೇ ನಿನ್ನ ಗಳಿಸುವುದೆಷ್ಟು ಕಷ್ಟವೋ ,ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ ..
ಆದರೇನು ಮಾಡುವುದು ?
ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..!! :) :)







14 comments:

Dr.D.T.Krishna Murthy. said...

'ಏನನ್ನಾದರೂ ನಂಬೋದಿದ್ದರೆ ನಂಬಿಕೆಯನ್ನೇ ನಂಬು'ಎನ್ನುವ ಮಾತು ಎಷ್ಟು ಸತ್ಯ.ಅಭಿನಂದನೆಗಳು.

Subrahmanya said...

Very good lines.

ಶಿವಪ್ರಕಾಶ್ said...

Yes.. Trust and confidence are very important in life.. :)
Nice one..

ಮನಸು said...

ನಂಬಿಕೆ ಇರಬೇಕು ಜೀವನ ನೆಡೆಸೋಕೆ...........ತುಂಬಾ ಚೆನ್ನಾಗಿವೆ ನಿಮ್ಮ ಸಾಲುಗಳು

ಸೀತಾರಾಮ. ಕೆ. / SITARAM.K said...

ನಂಬಿಕೆ ಎಲ್ಲ ಸಂಭಂಧಗಳ ಹುಟ್ಟಿಗೆ ಭದ್ರವಾದ ಅಡಿಪಾಯ!. ಚೆ೦ದದ ಕವನದಲ್ಲಿ ಈ ಸತ್ಯ ಹೇಳಿದ್ದಿರಾ...

ಮನಸಿನಮನೆಯವನು said...

Snow White,

ಹೌದು ತುಂಬಾ ಅರ್ಥಗರ್ಭಿತವಾದ ಸಾಲುಗಳು..
ನಂಬಿಕೆಯ ಮೇಲೆಯೇ ನಿಂತಿದೆ ಬದುಕು ಎಂಬುದಕ್ಕೆ ಎಲ್ಲವೂ ನಿದರ್ಶನಗಳೇ...
ತುಂಬಾ ಇಷ್ಟವಾಯಿತು.

ಸವಿಗನಸು said...

ಚೆಂದದ ಸಾಲುಗಳು...
ಅರ್ಥಪೂರ್ಣ....

ದಿನಕರ ಮೊಗೇರ said...

houdu ellaa nambikeya mele nintide jagattu....

olleya kavanakke dhanyavaada...

nanna blog goo banni....

ಸಾಗರದಾಚೆಯ ಇಂಚರ said...

ನಂಬದೆ ಬದುಕಿಲ್ಲ, ನಂಬಿ ಕೆಟ್ಟವರಿಲ್ಲ
ನಂಬದೆ ವಿಧಿಯಿಲ್ಲ ಜಗದೊಳಗೆ

Creativity said...

ಬಹಳ ಚೆನ್ನಾಗಿದೆ ಗೆಳತಿ.

V.R.BHAT said...

'ವಿಶ್ವಾಸೋ ಫಲದಾಯಕಃ 'ಎಂದು ಸಂಸ್ಕೃತದ ಉಕ್ತಿ, ತಮ್ಮ ಕವನ ಚೆನ್ನಾಗಿದೆ, ಧನ್ಯವಾದಗಳು

Raghu said...

ನಂಬಿಕೆ ಬೇಕು ಯಾವುದೇ ಕೆಲಸಕ್ಕೂ..ಇಲ್ಲ ಅಂದ್ರೆ ಎಲ್ಲಾ...ಲೊಳಲೊಟ್ಟೆ.......
ನಿಮ್ಮವ,
ರಾಘು.

ಜಲನಯನ said...

ನಿಜ ನೋಡಿ..ನಂಬಿಕೆಯೇ ಎಲ್ಲ ವಿಶ್ವಾಸಗಳಿಗೆ ಮೂಲ ಹಾಗೆಯೇ ವಿಶ್ವಾಸ ಇಲ್ಲದೇ ನಂಬಿಕೆ ಬರಲು ಅಸಾಧ್ಯ...

Snow White said...

pratikrihisida ella snehitarige nanna dhanyavadagalu :) yavagalu barutta iri :)