
ಮನದ ಭಾವಗಳಿಗೆ ನದಿಯೊಂದು ಬೇಕಿದೆ..
ಆ ನದಿ ಹರಿದು ಗೆಳೆಯನ ಮನ ಸೇರಬೇಕಿದೆ ..
ಕಲ್ಲು ಹೃದಯವ ಕರಗಿಸಬೇಕಿದೆ..
ಸ್ನೇಹದ ಸುಮವ ಅರಳಿಸಬೇಕಿದೆ ..
ಅಪನಂಬಿಕೆಯ ಕಳೆ ತೆಗೆದು..
ಅಕ್ಕರೆಯ ನೀರೆರೆದು..
ಅದ ಕಾಪಾಡುವ ಹೊಣೆ ನನ್ನದೇ ಆಗಿದೆ..
ಹೂವು ಅರಳಿ ಪರಿಮಳವ ಚೆಲ್ಲಿದಾಗ,
ಗೆಳೆಯನ ಕಣ್ಣಲಿ ಸಂತಸವದು ಮಿಂಚಿದಾಗ,
ನಾ ಕಂಡ ಕನಸೆಲ್ಲ ನನಸಾಗದೇ ಆಗ..
ನಾ ಕಂಡ ಕನಸೆಲ್ಲ ನನಸಾಗದೇ ಬೇಗ ? :) :)
ತುಂಬಾ ಕೆಲಸವಿದ್ದ ಕಾರಣ ಗೆಳೆಯರ ಬ್ಲಾಗ್ ಗಳಿಗೆ ಭೇಟಿನೀಡಲು ಆಗಲಿಲ್ಲ ..ನಿಮ್ಮ ಸಹಕಾರ ಹೀಗೆ ಇರಲಿ.

3 comments:
ಬೇಗ ನದಿ ಹರಿಯಲಿ...
ಹನಿ ಹೆಚ್ಚಾದರೆ ಹಳ್ಳ ತಾನೇ ಆಗಿ ಹರಿಯುತ್ತೆ...
ಕಲ್ಲನ್ನು ಕರಗಿಸುತ್ತೆ....
ಚೆಂದದ ಕವನ.
ಚೆನ್ನಾಗಿದೆ.. ಕವಿತೆ..
ನಿಮ್ಮ ಕವನ ಚೆನ್ನಾಗಿದೆ.. ಅದನ್ನು ಓದಿ ನನಗೆ ಒಂದು ಭಾವಗೀತೆ ನೆನಪಿಗೆ ಬಂತು.. "ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ, ಕರೆಯುವೆ ಕೈಬೀಸೀ, ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ"... ಒಳ್ಳೆಯ ಬರಹಕ್ಕಾಗಿ ನಿಮಗೆ ಅಭಿನಂದನೆಗಳು....
Post a Comment