December 30, 2009



ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ ..
ಸಿಕ್ಕರು ಬಾಳ ದಾರಿಯಲಿ ಎಷ್ಟೊಂದು ಮಿತ್ರರು ..
ಮನದಿಂದ ದೂರದವರು ಕೇವಲ ಒಬ್ಬರೋ ಇಬ್ಬರೋ ..
ತಂದಿರುವೆ ನೀ ನನಗೆ ಸಾಕಷ್ಟು ನೆಮ್ಮದಿ ಪ್ರೀತಿ ..
ಓಡಿಸಿರುವೆ ಬಹು ದೂರಕೆ ನೋವು ದುಃಖ ಭೀತಿ ..
ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ .. :)


ಇದನ್ನು ನಾನು ಬರೆದಾಗ ಇನ್ನೂ ನಾವು ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿರಲ್ಲಿಲ್ಲ....

December 21, 2009

ಕವಲು ದಾರಿ



ಬಾಳಲ್ಲಿ ಸಿಗುವುದು ನೂರಾರು ಕವಲು ದಾರಿಗಳು ..
ಎತ್ತ ನಡೆದರೆ ಸರಿ..
ತಿಳಿದವರು ಯಾರು ?
ಪ್ರತಿ ದಾರಿಯಲು ಸಿಗುವರು ಬಗೆ ಬಗೆಯ ಜನರು
ಯಾರು ನಮ್ಮವರು ಎಂದು ಬಲ್ಲವರಾರು.. ?
ನಡೆವ ದಾರಿ ಹಸಿರಾಗಲಿ ಎಂದು ಬಯಸುವಾ...
ಸಿಗುವ ಮಂದಿ ನಮ್ಮ ಜೊತೆಯಾಗಲಿ ಎಂದು ಹರಸುವಾ...

December 17, 2009

ಜೇಡರ ಬಲೆ





ಬಂದಿಯಾಗಿರುವೆ ಈ ಬಲೆಯಲ್ಲಿ..
ಎತ್ತ ನೋಡಿದರು ಕಾಣದು ಹೊರಬರುವ ದಾರಿ..
ಜೇಡರ ಬಲೆಯೇ ನಾ ಸಿಕ್ಕಿ ಬಿದ್ದಿದಾದರು ಹೇಗೆ ಇಲ್ಲಿ ?
ಬಿಟ್ಟು ಬಿಡು ನನ್ನನ್ನು ....
ಬಾಳಬೇಕಾಗಿದೆ ನಾನು .. !!
ಯಾವುದೀ ಬಲೆ ಎಂದು ಗೊತ್ತೇ ನಿಮಗೆ..?
ನಮ್ಮ ಸುತ್ತ ಇರುವ ಕಾಣದ ಬಲೆಗಲಿವು ..!!
ಬಿಟ್ಟು ಬಿಡಿ ನನ್ನನ್ನು ..
ಬದುಕಬೇಕಾಗಿದೆ ನಾನು ..!!



December 12, 2009



ಎತ್ತ ನೋಡಿದರತ್ತ ಮಂಜು ಮುಸುಕಿದೆ ..
ಸುತ್ತ ಮುತ್ತಲು ಕಾಡು ಹರಡಿದೆ ..
ನಡೆಯಲು ದಾರಿ ಒಂದು ಕಣ್ಣ ಮುಂದಿದೆ ..
ಮುಂದೆ ಹೋಗಲೋ ಗೆಳೆಯ ,ಇಲ್ಲ ನಿನ್ನ ಕಾಯಲೋ ?..

December 2, 2009

ಸುರಿವ ಮಂಜಲಿ ..



ಸುರಿವ ಮಂಜಲಿ ..
ಕೊರೆವ ಚಳಿಯಲ್ಲಿ ..
ಜಗವೇ ಮಲಗಿದಂತಿದೆ ..
ತಿಳಿಯ ನೀರಲ್ಲಿ ..
ಸುರಿವ ಹಿಮದಲ್ಲಿ ..
ಮನವು ಮಿಂದಿದೆ ..
ಎಲ್ಲಿ ನೋಡಿದರಲ್ಲಿ ಹಿಮದ ರಾಶಿ ಕಂಡಿದೆ ..
ಪ್ರಕೃತಿಯೇ ನಿನ್ನ ಚೆಲುವ ನೋಡಲು ಎರಡು ಕಣ್ಣು ಸಾಲದೇ ..!!

ಯಾಕಾಗಿ ಬಂದೆ ನಾ ಇಲ್ಲಿಗೆ ?




ಬಿಟ್ಟು ಬಂದೆ ನಾ ನನ್ನ ಜನರನ್ನು ..

ಬಿಟ್ಟು ಬಂದೆ ನಾ ನನ್ನ ಕನಸನ್ನು ..

ಬಿಟ್ಟು ಬಂದಿರುವೆ ನನ್ನ ಸವಿ ನೆನಪುಗಳನ್ನು ..

ಬಿಟ್ಟು ಬಂದಿರುವೆ ನಾ ನನ್ನನ್ನು , ನನ್ನ ಮನವನ್ನು !!

ಯಾಕಾಗಿ ಬಂದೆ ನಾ ಇಲ್ಲಿಗೆ ?

ನೆಚ್ಚಿ ಬಂದಿರುವೆ ಏನ್ನನ್ನು ಈ ನಾಡಿಗೆ ?

ನಾ ಬಂದಿರಬಹುದು ಇಲ್ಲಿ ಬಾಳುವ ಸಲುವಾಗಿ ,

ಯಾರಿಗಾಗಿ ಬಾಳಲ್ಲಿ ನಾ , ನೀ ಇರಲು ಅಲ್ಲಿ ಒಂಟಿಯಾಗಿ ?

November 29, 2009

ಮತ್ತೆ ಹುಟ್ಟಲೇ ನಾ...


ಮತ್ತೆ ಹುಟ್ಟಲೇ ನಾ ನಿನ್ನ ಸಲುವಾಗಿ ..

ತುಂಬುವೆ ಖುಷಿ ನಿನ್ನ ಗೆಲುವಾಗಿ..

ಹುಟ್ಟಿ ಬರಲೇ ನಾ ನಿನ್ನ ನಗುವಾಗಿ ..

ಇಲ್ಲ ಸುತ್ತಿ ಬರಲೇ ನಾ ತಂಗಾಳಿಯಾಗಿ ..

ಏನಾಗಿ ಬರಲಿ ನಾ ಹೇಳು ನೀ ಗೆಳೆಯ ..

ಹುಟ್ಟಿ ಬರುವೆ ನಾ ನಿನ್ನ ಗೆಳತಿಯಾಗಿ ..

ಹುಟ್ಟಿ ಬರುವೆ ನಾ ನಿನ್ನ ಸಂಗಾತಿಯಾಗಿ !!!

November 19, 2009

ಕಲೆ


ಕಲೆಗೆ ಸೋಲದವರೇ ಇಲ್ಲ ..

ಸುಂದರ ಚಿತ್ರ ನೋಡಲು ಮನ ಹೂವಾಗುವುದು ..

ಚಂದದ ಕವಿತೆ ಓದಲು ಮೊಗದೆ ನಗು ಮೂಡುವುದು..

ಎಲ್ಲರಲ್ಲೂ ಉಂಟು ಒಂದೊಂದು ಕಲೆ ..

ಅದ ಹೊರತರಲು ಬೇಕು ಕಲಾವಿದನಿಗೊಂದು ನೆಲೆ !!

November 13, 2009

ಏನು ಮಾಡಿದೆ ನಾ ?


ಏನ ಮಾಡಿದೆನೆಂದು ನನ್ನ ತೊರೆದೆ ನೀ ?

ನಾ ಇರಲಿಲ್ಲವೇ ನಿನ್ನ ಜೊತೆ ಪ್ರತಿ ಕ್ಷಣದಲ್ಲೂ ದಿನದಲ್ಲೂ ..

ನನ್ನ ನೋವಿಗೆ ಜೊತೆಯಾಗಲ್ಲಿಲ ನೀ ,

ನನ್ನ ದನಿಗೆ ಧ್ವನಿ ಸೇರಿಸಲ್ಲಿಲ್ಲ ನೀ ,

ತಪ್ಪೆಲ್ಲ ನಿನ್ನದೇ ಆದರು ..ನೊಂದವಳು ನಾನೇ ಅಲ್ಲವೇ ?

ಏನ ಮಾಡಿದೆನೆಂದು ನನ್ನ ತೊರೆದೆ ನೀ..

ಏನ ಮಾಡಿದೆಂದು ನನ್ನ ತೊರೆದೆ ನೀ .. ? ? ?

November 8, 2009

ಸುಮಧುರ ಬಂಧ




ಅದೊಂದು ಸುಮಧುರ ಬಂಧ ..


ಜನ್ಮ ಜನ್ಮದ ಅನುಬಂಧ ..


ಜೊತೆಯಲ್ಲಿದರೆ ನಾವು ..


ಬರಲೇನು ಯಾವುದೇ ನೋವು ..


ನಮಗೆ ನಾವೇ ಎಲ್ಲ ..


ಬಾಳು ಹಾಲು ಸಕ್ಕರೆ ಬೆಲ್ಲ !! :) :)

October 28, 2009

ಹೆತ್ತವರು



ಬಾಲ್ಯದಲಿ ಜೊತೆಯಿದ್ದು ನಡೆಸುವರು ..

ಹರೆಯದಲ್ಲಿ ಸರಿ ದಾರಿ ತಿಳಿಸುವರು ..

ಮುಪ್ಪಲ್ಲಿ ನಮ್ಮ ದಾರಿ ಕಾಯುವರು ..

ಇರುವರು ಸದಾ ನಮ್ಮ ಜೊತೆಯಾಗಿ ,

ಬರುವರು ಹಿಂದೆ ನೆರಳಾಗಿ ..

ಕಣ್ಣಿಗೆ ಕಾಣುವ ದೇವರಿವರು ,

ಇವರೇ ನಮ್ಮ ಹೆತ್ತವರು !! :)

October 22, 2009

ನನ್ನ ಗೆಳೆಯ


ನಗುತಿರಲು ನೀ ನನ್ನ ಗೆಳೆಯ , ನಾ ನಗುವೇ ..

ದುಃಖ ತುಂಬಿರಲು ನಿನ್ನೆದೆಯ , ನಾ ಕಂಬನಿ ಮಿಡಿವೆ ..

ಸದಾ ಆಶಿಸುವೆ ನಾ ನಿನ್ನ ಗೆಲುವು ..

ಬೇಡವೇ ಬೇಡ ನಿನಗ್ಯಾವ ನೋವು ..

ತುಂಬಿರಲಿ ಸದಾ ಹರುಷ ನಿನ್ನ ಬದುಕಿನಲ್ಲಿ ..

ಬೆಳಗಿರಲಿ ನಗೆ ದೀಪ ನಿನ್ನ ಮನಸಿನಲ್ಲಿ :) :)

October 19, 2009

ರಾತ್ರಿ


ಬಾನಲ್ಲಿ ನಗುವ ಚಂದಿರನ ಕಂಡು ,

ನಾವೇನು ಕಮ್ಮಿ ಎನ್ನುವಂತಿದೆ ಈ ಅಲೆಗಳ ದಂಡು ..

ಚಂದ್ರಮನ ತಂಪು ನೋಟದ ಜೊತೆ ಜೊತೆಗೆ ,

ನಮಗಿದೋ ಈ ಅಲೆಗೆಳ ಇಂಪು ನಿನಾದದ ಕೊಡುಗೆ ..

ಈ ಸೊಬಗ ನೋಡುತಿರಲು ಕಣ್ಣತುಂಬಿ ಬಂದಿದೆ ,

ನಿಸರ್ಗವೇ ನಿನ್ನ ನ್ಯಜತೆಯೇ ಕಣ್ಣೆದುರು ಕಲೆಯಾಗಿ ನಿಂತಿದೆ !!

October 17, 2009

ಬೆಳಕಿನ ಹಬ್ಬ



ಬೆಳಕಿನ ಹಬ್ಬಕ್ಕೆ ಕೋರುವ ಸ್ವಾಗತ


ಬೆಳಗುವ ದೀಪಗಳನು ದೇವರಿಗೆ ತಲೆಬಾಗುತ ..


ನಮ್ಮನು ತುಂಬಲಿ ದೀಪಗಳ ಬೆಳಕು ..


ಬಾಳಲಿ ತರಲಿ ಅದು ಬಂಗಾರದ ಫಲುಕು ..


ಹೊಸ ಬಟ್ಟೆಗಳ ಜೊತೆ ಹೊಸ ಭಾವಗಳು ನಮಗಿರಲಿ ..


ಈ ಹಬ್ಬ ಸಂತಸ ತರುವ ದೀವಿಗೆಯಾಗಲಿ :) :)

October 14, 2009

ಗೆಳೆತನ



ಜೊತೆಗೆ ಸಾಗುವಾಗ ನಾವು ,
ನಮಗೇಕೆ ಕಲ್ಲು ಮುಳ್ಳಿನ ಚಿಂತೆ ..
ಒಂದಾಗಿ ನಡೆವಾಗ ನಾವು ,
ಈ ದಾರಿಯೇ ಶುಭ ಕೋರುವುದಂತೆ !! :) 

October 11, 2009

ನಿನ್ನ ನೆನಪು



ತಂಪು ತಂಗಾಳಿಯಲಿ ನಿನ್ನದೇ ನೆನಪು ..


ಸುರಿವ ಜಟಿ ಮಳೆಯಲ್ಲಿ ನಿನ್ನದೇ ಕನಸು ..


ಎಲ್ಲಿ ಕಾಣಲಲ್ಲಿ ನಿನ್ನದೇ ಸವಿ ನಗುವು ..


ನನ್ನ ಸೆಳೆಯುತಿದೆ ನಲ್ಲ , ನಿನ್ನ ಸಿರಿ ಒಲವು !!

October 9, 2009

ಉಯ್ಯಾಲೆ


ಜೀವನವೇ ಒಂದು ಉಯ್ಯಾಲೆಯ ರೀತಿ ..
ಒಮ್ಮೆ ಮೇಲೆ , ಒಮ್ಮೆ ಕೆಳಗೆ ..
ಮೇಲೇರುವಾಗ ಆಕಾಶವೇ ತೋಳಲಿ ,
ಕೆಳಗಿಳಿಯುವಾಗ ನೂರಾರು ನೋವು ಕಣ್ಣಲಿ ..
ಆಟದಲ್ಲುಂಟು ಸೋಲು ಗೆಲುವು..
ಬಾಳಿನಲ್ಲೂ ಉಂಟು ಸಂತೋಷದ ನಲಿವು ಗೆಲುವು :) :)

October 7, 2009

ನನ್ನ ಪ್ರೀತಿಯ ಗೂಡು




ಪ್ರೀತಿಯ ಗೂಡಿಗೆ , ನಾನೇ ತಳಿರು ತೋರಣ ..
ಮನೆಯ ಗುಡಿಗೆ , ನೀನೆ ಸಿಹಿ ಹೂರಣ ..
ನೀ ಇರಲು ಜೊತೆಯಲ್ಲಿ , ಮನೆಯೇ ಅರಮನೆಯಂತೆ ..
ನಮಗೇಕೆ ಬೇಕು ಲೋಕದ ಅಂತೆ ಕಂತೆ !! :)

October 5, 2009

ಕಡಲು


ಕಾಣದ ಕಡಲಿಗೆ ಹಂಬಲಿಸಿದೆ ಮನ ..
ಕಡಲ ಒಡಲಲ್ಲಿ ಏನು ಇರುವುದೋ ಕಾಣೆನಲ್ಲ ?
ಇರಬಹುದು ಮುತ್ತು ,ಇರಬಹುದು ಸಾವಿನ ಕುತ್ತು ..
ಆದರೆ ಇವೆಲ್ಲ ತಿಳಿವುದೇ , ಈ ಪೆದ್ದು ಮನಕೆ , ಅದರೊಳಗಿನ ಮುದ್ದು ಆಸೆಗೆ !!

October 3, 2009

ಇರುಳು







ಇರುಳು ಸುತ್ತಲು ಮುತ್ತಿದೆ ..



ತಂಗಾಳಿ ಮೆಲ್ಲನೆ ಬೀಸಿದೆ ..



ಕನಸಿನ ದೋಣಿಯನು ಏರಲು , ಇಗೋ ಈ ಕಣ್ಣುಗಳು ಕಾದಿವೆ ..



ಇನ್ನೇನು ಹೊರಟಿದೆ ಇದರ ಪಯಣ ..



ಸವಿಗನಸುಗಳು ಕಣ್ಣು ತುಂಬಲಿ ಎಂದು ಹರಸೋಣ :)

October 2, 2009

ಸಂಬಂಧಗಳು


ನಗುವಾಗ ಬಂಧುಗಳು ..
ನಲಿವಾಗ ಸಂಬಂಧಗಳು ..
ಧರೆಯೆ ನಾಕವಂತೆ ..
ಭುವಿಯೇ ಸ್ವರ್ಗದಂತೆ .. :)
ಜೊತೆ ಇರಲು ನಾವು ಒಂದಾಗಿ ..
ಯಾರು ನಿಲ್ಲಬಲ್ಲರು ಎದುರಾಗಿ ? :) :)

October 1, 2009

ಬೆಳಕು


ಬೆಳಕೆಂದರೆ ಹೊಸ ದಿನದ ಆರಂಭ ..


ಹೊಸ ಜೀವನದ ಪ್ರಾರಂಭ ..


ಇದ್ದರೆ ಸಾಲದು ಬರಿ ಬೆಳಕು ಹೊರಗೆ ..


ಬೆಳಗಲೆ ಬೇಕು ಅದು ನಮ್ಮಿ ಹೃದಯದೊಳಗೆ .. :)


ಬೆಳಗಲಿ ಜಗವೆಲ್ಲ ಈ ಬೆಳಕಲಿ ..


ತುಂಬಲಿ ಸುಖ ಸಂತೋಷ ಮನದಲಿ :) :)


September 22, 2009

ಕನಸು


ಕನಸುಗಳಿಗಿಲ್ಲ ಯಾವುದೇ ಬೇಲಿ ...

ಕನಸುಗಲ್ಲಿಳದ ಬಾಳು ಖಾಲಿ ಖಾಲಿ...

ಕನಸೆಲ್ಲ ನನಸಾಗಲು ಬೇಕು ಪರಿಶ್ರಮ ...

ಜೊತೆಗೆ ಬೇಕೆ ಬೇಕು ಮಾಡುವ ಕೆಲಸದಲ್ಲಿ ಪ್ರೇಮ :)

September 13, 2009

ನಮ್ಮೊಳಗಿನ ನಾವು



ಹೊರಗೆ ಹುಸಿ ಪ್ರೀತಿ , ಒಳಗೆ ಹಸಿ ದ್ವೇಷ
ಹೊರಗೆ ನಸು ನಗು,ಒಳಗೆ ಬಿಸಿ ಕೋಪ
ಹೊರಗುಂಟು ಹಸುವಿನ ವೇಷ,ಒಳಗೆ ಹುಲಿಯ ಆವೇಶ
ನಮ್ಮೊಳಗಿನ ನಮ್ಮನ್ನು ತಿಳಿದವರು ಯಾರಿಲ್ಲ,
ನಮ್ಮನು ನಾವೇ ತಿದ್ದುವುದು ಸರಿಯಲ್ಲ !

ಜಯ


ಜಯವೆಂಬುದು ಕೇವಲ ಮಾತಲ್ಲ..
ಅದೊಂದು ಸುಂದರ ಅನುಭವ..
ಸಿಗಲು ಯಶಸ್ಸು ಬಾಳಲಿ..
ಇರಬೇಕು ವಿಶ್ವಾಸ ಮನದಲಿ..
ಗೆದ್ದೇ ಗೆಲ್ಲುವೆನೆಂಬ ಛಲ ಇದ್ದಾಗ ಜೊತೆಗೆ..
ಯಾರು ಎದುರಿಲ್ಲ ನಮಗೆ :)

September 6, 2009

ಮದುವೆ


ಎಲ್ಲಿಯೋ ಇರುವ ಎರಡು ಜೀವಗಳು,
ಒಂದಾಗುವವು ಈ ಬಂಧದಲಿ ...
ನೂರಾರು ಜನರು ಒಂದಗುವರು ಸಂಬಂಧದಲಿ ..
ಅರಿತು ಬೆರೆತು ಒಬ್ಬರನ್ನು ಒಬ್ಬರು,
ಜೊತೆಯಾಗುವರು ಈ ಜನ್ಮದಲಿ , ಮರು ಜನ್ಮದಲಿ !

ನೀನು

ನಿನ್ನ ಏನೆಂದು ಕರೆಯಲಿ
ನಿನ್ನ ಯಾರೆಂದು ತಿಳಿಯಲಿ
ತಿಳಿಯದು ನನಗೇನು ನಿನ್ನ ವಿಷಯ
ಆದರು ಮನದೊಳಗೆ ಇರುವೆ ನೀ ಗೆಳೆಯ
ಕೆಲವೊಮ್ಮೆ ನಸು ನಗುವು,ಕೆಲವೊಮ್ಮೆ ಹುಸಿ ಮುನಿಸು
ಯಾರಾದರೇನು ನೀ ಚೆನ್ನ ?
ನೀ ಗೆಲ್ಲಬಲ್ಲೆಯೇನು ನನ್ನ !

September 5, 2009

ಗುರುವಿಗೆ ನಮನ


ಗುರುವಿಲ್ಲದ ವಿದ್ಯೆ ಗುರಿ ಮುಟ್ಟದಯ್ಯ
ಗುರುವಿಲ್ಲದ ಬಾಳು ಬರಿ ಗೋಳುಯ್ಯ
ಗುರುವಿದ್ದರೆ ಬದುಕಿಗೆ , ತಿಳಿಸುವರು ಒಳಿತು ಕೆಡುಕು
ಗುರುವಿನ ಮಾತಂತೆ ನಡೆದರೆ ಸೊಗಸು ಬದುಕು
ಈವರೆಗೆ ಕಲಿಸಿದ ಎಲ್ಲ ಗುರುಗಳಿರ
ಇದೋ ನನ್ನ ಒಲವಿನ ನಮನ
ಸಾಲದು ನಿಮಗೆ ಯಾವುದೇ ಸನ್ಮಾನ !

September 4, 2009

ಹೊಸತನ


ಹೊಸ ಬೆಳಗು
ಹೊಸ ಕನಸು
ಹೊತ್ತು ತರಲು ಹೊಸ ದಿನ
ಜೊತೆಗೆ ಇರಲು ಹೊಸ ಮೈ ಮನ
ಜಗವೇ ಕಿಯಲ್ಲಿ ಜಯವೆ ನಮಗಿಲ್ಲಿ
ಇದಕಿಂತ ಬೇಕ ಜೀವನ
ಈಗ ಬಾಳೆ ಹೂಬನ

September 2, 2009

ಜೀವನ


ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಇರುವಾಗ ಅದೇಕೆ?
ಇರದಾಗ ಅದೇ ಬೇಕೆ ..
ಸಿಗುವಾಗ ನಿಜ ಒಲುಮೆ ನಮಗಿಲ್ಲ ಅದರ ಚಿಂತೆ
ತಿಳಿದಾಗ ಅದರ ಮಹಿಮೆ ಅದು ಸಿಗಲಾರದಂತೆ
ಹಾಗೆಂದು ಜೀವನದಲ್ಲಿ ಸಿಗುವುದೆಲ್ಲ ನಿರಾಸೆಯಲ್ಲ
ಒಳ್ಳೆಯ ದಿನಗಳು ನಮಗಾಗಿ ಕಾದಿದೆಯಲ್ಲ

ಶುಭ ಕಾಲ


ಶುಭ ಕಾಲ ಬಂದಾಗ ನನಗೆ
ನೋವೆಲ್ಲ ಸರಿವುದು ಮರೆಗೆ
ಮನ ಮಿಡಿಯುತಿದೆ ಆ ಕ್ಷಣಕೆ
ನನಸಾಗಿಸಲು ತನ್ನೆಲ್ಲ ಬಯಕೆ
ಇದಕೆ ಹೊರಬೇಕಿದೆ ನಾ ಹರಕೆ
ಜೊತೆಗೆ ಬೇಕು ನಿಮ್ಮೆಲ್ಲರ ಹಾರಯ್ಕೆ

ಸುಮ


ಸುಮ ಎಂದರೆ ಮೃದು
ಸುಮ ಎಂದರೆ ಮುದ
ಸುಮ ಎಂದರೆ ಅವಳೊಂದು ಜೀವ
ಅವಳಲ್ಲೂ ಉಂಟೋ ನೂರಾರು ಭಾವ
ಸುಮ ಇರಲೇ ಬೇಕಿಲ್ಲ ಯಾವಾಗಲು ಸುಮ್ಮನೆ
ಅವಳಿಗೂ ಇರಬಹುದಲ್ಲ ನೂರೆಂಟು ಕಲ್ಪನೆ
ಸುಮಾಳಿಗೆ ಬೇಕೀಗ ಎಲ್ಲರ ಸ್ನೇಹ
ಅವಳು ಪೂರಯಿಸಲು ತನ್ನೆಲ್ಲ ಧ್ಯೇಯ

August 29, 2009

ನಲಿವು


ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೆನು ನೀ ಬರೋ ದಾರಿಯಾ
ನಗು ನಗುತ ಹರಸುವೆನು ಸಿರಿ ಸುಖ ಆಶಯ

August 27, 2009

ಸ್ನೇಹ


ಇರುವರು ಸ್ನೇಹಿತರು ನೂರಾರು
ಬರುವರು ಸ್ನೇಹಿತರು ನೂರಾರು
ಇರುವ ಬರುವ ಸ್ನೇಹಿತರ ನಡುವೆ
ನಮ್ಮ ಸ್ನೇಹ ಇರಲಿ ಎಂದೆಂದು
ಆ ಸ್ನೇಹದ ಸವಿ ನೆನಪು ಬರಲಿ ಎಂದೆಂದು

ಬೆಳದಿಂಗಳು


ಬೆಳದಿಂಗಳ ರಾತ್ರಿ ಚೆನ್ನ
ಅದು ನಿನ್ನನ್ನೇ ನೆನಪಿಸುತಿದೆ ಚಿನ್ನ
ನಾ ಮರೆತರೆ ನಿನ್ನ
ನಾ ಮರೆತಂತಲ್ಲವೇ ನನ್ನ

ನಗು


ನಗುವಾಗ ಬಾಳು ಸುಂದರ
ನಗುವಾಗ ಹಾಡು ಸುಮಧುರ
ನಗುವಾಗ ಇರಲು ನೀ ಹತ್ತಿರ
ನಮ್ಮ ಬಾಳೇ ಬಂಗಾರ, ನೀನೆ ಅದರ ಮಂದಾರ

ಭಾವನೆಗಳ ಬೆನ್ನಟ್ಟಿ


ಇದಕಾಗಿ ನಾ ಬಿಟ್ಟೆನಲ್ಲೋ ಅದನು
ಇದು ಸಿಗಲ್ಲಿಲ್ಲ
ಅದು ಹೋಯಿತಲ್ಲ
ಇರುವ ಇದನು ನಾ ಗೆಲ್ಲಲೇಬೇಕು
ಗುರಿ ಮುಟ್ಟಲೇಬೇಕು
ನನ್ನ ದಾರಿಗೆ ನೀ ದಾರಿ ದೀಪವಾಗಬೇಕು
ನನ್ನ ಗೆಲುವ ನೀ ನೋಡಬೇಕು