December 2, 2009

ಸುರಿವ ಮಂಜಲಿ ..



ಸುರಿವ ಮಂಜಲಿ ..
ಕೊರೆವ ಚಳಿಯಲ್ಲಿ ..
ಜಗವೇ ಮಲಗಿದಂತಿದೆ ..
ತಿಳಿಯ ನೀರಲ್ಲಿ ..
ಸುರಿವ ಹಿಮದಲ್ಲಿ ..
ಮನವು ಮಿಂದಿದೆ ..
ಎಲ್ಲಿ ನೋಡಿದರಲ್ಲಿ ಹಿಮದ ರಾಶಿ ಕಂಡಿದೆ ..
ಪ್ರಕೃತಿಯೇ ನಿನ್ನ ಚೆಲುವ ನೋಡಲು ಎರಡು ಕಣ್ಣು ಸಾಲದೇ ..!!

8 comments:

ಮನಸು said...

ವಾಹ್!!! ಸೂಪರ್ ಪ್ರಕೃತಿಯ ಮಡಿಲಲ್ಲಿ ಹಲವು ಸುಂದರತೆಗಳಿವೆ ಅಲ್ಲವೆ..? ಕ್ಷಮಿಸಿ ಮೊದಲೆರಡು ಕವನಗಳಿಗೆ ಅನಿಸಿಕೆ ತಿಳಿಸಿಲ್ಲ ಕಾರಣ ಅನಿಸಿಕೆ ಪೋಸ್ಟ್ ಮಾಡಲಾಗಲಿಲ್ಲ ಇದು ಅಷ್ಟೇ ೨ದಿನದಿಂದ ಆಗಲಿಲ್ಲ ಇಂದು ಹಾಕಲಾಯಿತು.
ವಂದನೆಗಳು

ಶಿವಪ್ರಕಾಶ್ said...

Wah... ತುಂಬಾ ಚನ್ನಾಗಿದೆ..
ನಿಮ್ಮ ಹೊಸ ಬ್ಲಾಗ್ ಟೆಂಪ್ಲೇಟ್ ಕೂಡ ತುಂಬಾ ಚನ್ನಾಗಿದೆ...

ಚುಕ್ಕಿಚಿತ್ತಾರ said...

ಚೆ೦ದದ ಕವನ . ಹೊಸ ಭಾವದೊ೦ದಿಗೆ ಇನ್ನಷ್ಟು ಹೊಸ ಕವಿತೆಗಳು ಮೂಡಿ ಬರಲಿ.

Snow White said...

ಮನಸು ಅವರೇ,
ತುಂಬ ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ..ತೊಂದರೆಯನ್ನು ಸರಿಪಡಿಸಲು ಪ್ರಯತ್ನಿಸುವೆ..
ಯಾವಾಗಲು ಬರುತ್ತಾ ಇರಿ :)

Snow White said...

ಶಿವಪ್ರಕಾಶ್ ಅವರೇ,
ತುಂಬ ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ... ಟೆಂಪ್ಲೇಟ್ ನಿಮಗೆ ಇಷ್ಟ ಆಗಿದಕ್ಕೆ ಖುಷಿಯಾಗಿದೆ :)
ಯಾವಾಗಲು ಬರುತ್ತಾ ಇರಿ :)

Snow White said...

ಚುಕ್ಕಿಚಿತ್ತಾರ ಅವರೇ,
ಧನ್ಯವಾದಗಳು ನಿಮ್ಮ ಮಾತುಗಳಿಗೆ ..ಹೊಸ ಭಾವದೊಂದಿಗೆ ಬರೆಯಲು ಪ್ರಯತ್ನಿಸುವೆ ...
ಯಾವಾಗಲು ಬರುತ್ತಾ ಇರಿ :)

Raghu said...

ಪ್ರಕೃತಿ ಒಂದು ಮಾಯೆ... ಕೆಲೊಮ್ಮೆ ತುಂಬಾ ಸುಂದರ.. ಕೆಲವುಬಾರಿ ಮಾಡುತ್ತೆ ರುದ್ರ-ನರ್ತನ!... ಚೆನ್ನಾಗಿದೆ ನಿಮ್ಮ ಕವನ...
ನಿಮ್ಮವ,
ರಾಘು.

Snow White said...

ರಾಘು ಅವರೇ ,
ನಿಮ್ಮ ಮಾತು ಸತ್ಯ..ಪ್ರಕೃತಿಯೇ ಮಾಯೆ :) ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು :)