December 30, 2009



ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ ..
ಸಿಕ್ಕರು ಬಾಳ ದಾರಿಯಲಿ ಎಷ್ಟೊಂದು ಮಿತ್ರರು ..
ಮನದಿಂದ ದೂರದವರು ಕೇವಲ ಒಬ್ಬರೋ ಇಬ್ಬರೋ ..
ತಂದಿರುವೆ ನೀ ನನಗೆ ಸಾಕಷ್ಟು ನೆಮ್ಮದಿ ಪ್ರೀತಿ ..
ಓಡಿಸಿರುವೆ ಬಹು ದೂರಕೆ ನೋವು ದುಃಖ ಭೀತಿ ..
ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ .. :)


ಇದನ್ನು ನಾನು ಬರೆದಾಗ ಇನ್ನೂ ನಾವು ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿರಲ್ಲಿಲ್ಲ....

10 comments:

Guruprasad said...

ಗತಿಸಿ ಹೋದ ದಿನಗಳ ನೆನಪಿಸಿಕೊಳ್ಳುವ ಕವನ,,, ತುಂಬ ಚೆನ್ನಾಗಿ ಇದೆ...

ದಿನಕರ ಮೊಗೇರ said...

ಕಳೆದ ವರ್ಷಕ್ಕೆ, ಧನ್ಯವಾದ ಹೇಳಿದ ರೀತಿ ತುಂಬಾ ಚೆನ್ನಾಗಿದೆ........ ಹೊಸ ವರ್ಷದ ಸುಭಾಶಯಗಳು

ಶಿವಪ್ರಕಾಶ್ said...

ಸುಂದರ ಸಾಲುಗಳು.
ಕಳೆದು ಹೋಗುತ್ತಿರುವ ವರ್ಷಕ್ಕೆ ಧನ್ಯವಾದ ಹೇಳಿ, ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.
ಹೊಸ ವರ್ಷ ಎಲ್ಲರ ಬಾಳಲ್ಲಿ ಸುಖ ಸಂತೋಷ ತರಲಿ...
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

shridhar said...

ನಿಮ್ಮ ಕವನ ಸಾಗಿ ಹೋದ ವರುಷದ ನೆನಪನ್ನು ಹಸಿಯಾಗಿಸಿದೆ.
ನಲ್ಮೆಯ ಕಲಾವಿದರ ಕಣ್ಮರೆಯಲ್ಲಿ , ಹೊಸ ವರುಷಕ್ಕೆ ಕಾಲು ಇಡುತ್ತಿದ್ದೆವೆ
ಕಾಲನ ಆಟದ ಮುಂದೆ ನಾವೆಲ್ಲ ಎನು ಅಲ್ಲ .. ಅಲ್ಲವಾ?

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಮನಮುಕ್ತಾ said...

ಕಳೆದ ವರ್ಷಕ್ಕೆ ಧನ್ಯವಾದ ಅರ್ಪಣೆ ಹೇಳಿದ ರೀತಿ ಹಿಡಿಸಿತು..

ನಿಮಗೆ ಹೊಸ ವರ್ಷದ ಹರ್ಷದಾಯಕವಾಗಿರಲಿ....
ನಿಮ್ಮಿ೦ದ ಹೊಸಹೊಸ ಬರಹಗಳು ಬರುತ್ತಿರಲಿ...
ವ೦ದನೆಗಳು.

Snow White said...

ಗುರು ಅವರೇ ,
ಧನ್ಯವಾದಗಳು ನಿಮ್ಮ ಮಾತುಗಳಿಗೆ ಸರ್ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು .. :)ಯಾವಾಗಲು ಬರುತ್ತಾ ಇರಿ :)

Snow White said...

ದಿನಕರ ಅವರೇ ,
ಧನ್ಯವಾದಗಳು ನಿಮ್ಮ ಮಾತುಗಳಿಗೆ ಸರ್ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು .. :)ಯಾವಾಗಲು ಬರುತ್ತಾ ಇರಿ :)

Snow White said...

ಶಿವಪ್ರಕಾಶ್ ಅವರೇ ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು .. :)ಯಾವಾಗಲು ಬರುತ್ತಾ ಇರಿ :)

Snow White said...

ಶ್ರೀಧರ್ ಅವರೇ ,
ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ....ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ,ನಿಮ್ಮ ಮಾತುಗಳು ನಿಜಕ್ಕೂ ಸತ್ಯ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು .. :)ಯಾವಾಗಲು ಬರುತ್ತಾ ಇರಿ :)

Snow White said...

ಮನಮುಕ್ತ ಅವರೇ ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ಹಾಗು ಶುಭಾಶಯಗಳಿಗೆ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು .. ನಿಮಗೂ ಸಹ ಹೊಸ ವರ್ಷ ಖುಷಿಯನ್ನು ತರಲಿ :)ಯಾವಾಗಲು ಬರುತ್ತಾ ಇರಿ :)