December 2, 2009

ಯಾಕಾಗಿ ಬಂದೆ ನಾ ಇಲ್ಲಿಗೆ ?




ಬಿಟ್ಟು ಬಂದೆ ನಾ ನನ್ನ ಜನರನ್ನು ..

ಬಿಟ್ಟು ಬಂದೆ ನಾ ನನ್ನ ಕನಸನ್ನು ..

ಬಿಟ್ಟು ಬಂದಿರುವೆ ನನ್ನ ಸವಿ ನೆನಪುಗಳನ್ನು ..

ಬಿಟ್ಟು ಬಂದಿರುವೆ ನಾ ನನ್ನನ್ನು , ನನ್ನ ಮನವನ್ನು !!

ಯಾಕಾಗಿ ಬಂದೆ ನಾ ಇಲ್ಲಿಗೆ ?

ನೆಚ್ಚಿ ಬಂದಿರುವೆ ಏನ್ನನ್ನು ಈ ನಾಡಿಗೆ ?

ನಾ ಬಂದಿರಬಹುದು ಇಲ್ಲಿ ಬಾಳುವ ಸಲುವಾಗಿ ,

ಯಾರಿಗಾಗಿ ಬಾಳಲ್ಲಿ ನಾ , ನೀ ಇರಲು ಅಲ್ಲಿ ಒಂಟಿಯಾಗಿ ?

10 comments:

ಶಿವಪ್ರಕಾಶ್ said...

ಸುಮ ಅವರೇ,
ಇರುವುದನ್ನು ಬಿಟ್ಟು, ಇರದುದರೆಡೆಗೆ ನಡೆವುದೇ ನಮ್ಮ ಜೀವನವಾಗಿಬಿಟ್ಟಿದೆ.
ಸುಂದರ ಕವನ.

Creativity said...

ಬಹಳ ಸುಂದರವಾದ ಕವನ ಸುಮ :) :)

Dileep Hegde said...

ಏನೆಲ್ಲಾ ಬಿಡಬೇಕಾಗುತ್ತದೆ ಅಲ್ಲವಾ.. ಎಷ್ಟೊಂದು Compromiseಗಳು ಈ ಜೀವನದಲ್ಲಿ...ಚೆನ್ನಾಗಿದೆ ಕವನ...

ಮಿತ್ರ ಗುರುದಾಸ ಹೆಗಡೆಯವರು ತಮ್ಮ ಬ್ಲಾಗ್ ನಲ್ಲಿ ಇದೇ ಅರ್ಥ ಬರುವ ಒಂದು ಕವನ ಪೋಸ್ಟ್ ಮಾಡಿದ್ದರು.. ಬಿಡುವಿದ್ದಾಗ ನೋಡಿ..

http://gurugamsha.blogspot.com/2009/10/blog-post.html

Snow White said...

ಶಿವಪ್ರಕಾಶ್ ಅವರೇ,
ನನ್ನ ಎರಡು ಬ್ಲಾಗ್ ಗಳನ್ನೂ ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು... :)ನಿಮ್ಮ ಮಾತು ನಿಜಕ್ಕೂ ಸತ್ಯ ...ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...ಇದರ ಬಗ್ಗೆ ನಾನು ಒಂದು ಕವಿತೆ ಬರೆದಿದ್ದೆ..ಸಮಯವಾದಾಗ ದಯವಿಟ್ಟು ಓದಿ..http://nanna-savi-nenapu.blogspot.com/2009/09/blog-post.html

Snow White said...

ಪ್ರಿಯ ಗೆಳತಿ ಸಹನಾ ..
ನಿಮ್ಮ ಮಾತುಗಳು ನಿಜಕ್ಕೂ ನನಗೆ ಹೊಸ ಹುರುಪು ತರುವುದು... :) ವಂದನೆಗಳು ನಿನಗೆ ಗೆಳತಿ :)

Snow White said...

ದಿಲೀಪ್ ಅವರೇ ,
ನಿಮ್ಮ ಮಾತುಗಳನ್ನು ನಾನು ಒಪ್ಪುತೇನೆ..ಜೀವದಲ್ಲಿ ಕೆಲವು ಬಾರಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ .... :)
ನೀವು ಹೇಳಿದ ಬ್ಲಾಗ್ ಗೆ ಭೇಟಿ ನೀಡಿ ಅವರ ಅನುಯಾಯಿ ಆಗಿದೆನ್ನೇ ....:) :) ಅವರ ಕವನವು ತುಂಬ ಚೆನ್ನಾಗಿದೆ .. :)
ವಂದನೆಗಳು ನಿಮಗೆ ಅವರ ಬ್ಲಾಗ್ ಬಗ್ಗೆ ಹೇಳಿದಕ್ಕೆ ....ಯಾವಾಗಲು ಬರುತ್ತಿರಿ .. :)

Raghu said...

ನೆನಪು, :)
ನಾನು ನೋಡಿದ ಮಟ್ಟಿಗೆ ನನ್ನ ಅನಿಸಿಕೆ.. ಹುಡುಗಿಯರು...ಜೀವನದಲ್ಲಿ ಜಾಸ್ತಿ ರಾಜಿ ಆಗೋದು.. ಅದು ಏನೆ ವಿಷಯ ಇರಲಿ.. ನಿಮ್ಮ ಕವನನು ಅದನ್ನೇ ಹೇಳ್ತಾ ಇದೆ ಅಲ್ವ.. ? ತುಂಬಾ ಚೆನ್ನಾಗಿದೆ...
ನಿಮ್ಮವ,
ರಾಘು.

Snow White said...

ರಾಘು ಅವರೇ
ನಿಮ್ಮ ಮಾತು ನಿಜಕ್ಕೂ ಸತ್ಯ ..ಧನ್ಯವಾದಗಳು ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದಕ್ಕೆ :) ಯಾವಾಗಲು ಬರುತ್ತಾ ಇರಿ :)

L'Étranger said...

ನಿಮ್ಮ ಭಾವನೆ ಚೆನ್ನಾಗಿ ವ್ಯಕ್ತಪಡಿಸಿದ್ದೀರ.

ನಿಮ್ಮ ಬ್ಲಾಗ್ನಲ್ಲಿ ಸಾಕಷ್ಟು ಭಾವ ತುಂಬಿದ ಕವನಗಳು -- ಅವಕ್ಕೆ ತುಂಬಾ ಚೆನ್ನಾಗಿ ಹೊಂದುವ ಚಿತ್ರಗಳು! ಇಷ್ಟವಾಯಿತು. :-)

Snow White said...

L'Etranger ಅವರೇ ,
ತುಂಬ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ.. :)ನಿಮ್ಮ ಬ್ಲಾಗ್ ಸಹ ಚೆನ್ನಾಗಿದೆ.. :)