November 13, 2009

ಏನು ಮಾಡಿದೆ ನಾ ?


ಏನ ಮಾಡಿದೆನೆಂದು ನನ್ನ ತೊರೆದೆ ನೀ ?

ನಾ ಇರಲಿಲ್ಲವೇ ನಿನ್ನ ಜೊತೆ ಪ್ರತಿ ಕ್ಷಣದಲ್ಲೂ ದಿನದಲ್ಲೂ ..

ನನ್ನ ನೋವಿಗೆ ಜೊತೆಯಾಗಲ್ಲಿಲ ನೀ ,

ನನ್ನ ದನಿಗೆ ಧ್ವನಿ ಸೇರಿಸಲ್ಲಿಲ್ಲ ನೀ ,

ತಪ್ಪೆಲ್ಲ ನಿನ್ನದೇ ಆದರು ..ನೊಂದವಳು ನಾನೇ ಅಲ್ಲವೇ ?

ಏನ ಮಾಡಿದೆನೆಂದು ನನ್ನ ತೊರೆದೆ ನೀ..

ಏನ ಮಾಡಿದೆಂದು ನನ್ನ ತೊರೆದೆ ನೀ .. ? ? ?

10 comments:

Creativity said...

ಹೃದಯದ ನೋವನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ ಸುಮ :) :)

Snow White said...

ಸಹನಾ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು.. :)ಯಾವಾಗಲು ಬರುತ್ತಾ ಇರಿ :)
ಸುಮಾ

Raghu said...

ನೆನಪಿನ ಸುಮ,
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆಯೇ? ನೋವಿನ ಅರ್ಥ ತಿಳಿದಿರುವುದು ಮನಸ್ಸಿರುವವರಿಗೆ ಮಾತ್ರ ತಾನೆ ಅಲ್ವ..ಅನುಕ್ಷಣ ನೀನಾದೆ 'ನೀ'ಗೆ ದ್ವನಿ, ಆ ದ್ವನಿಗೆ ಸ್ವರವಾದೆ, ಆ ಸ್ವರಕ್ಕೆ ರಾಗವಾದರೂ ಸೇರಲಿಲ್ಲ ಧ್ವನಿ ಧ್ವನಿಗೆ...
ಚೆನ್ನಾಗಿದೆ ನಿಮ್ಮ ನೋವು ತುಂಬಿದ ಭಾರದ ಸಾಲುಗಳು...
ನಿಮ್ಮವ
ರಾಘು,

Snow White said...

ರಾಘು ಅವರೇ ,
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು.. ನಿಮ್ಮ ಮಾತುಗಳು ನಿಜಕ್ಕೂ ಸತ್ಯ ..ನೋವಿನ ಅರ್ಥ ತಿಳಿದಿರುವುದು ಮನಸ್ಸಿರುವರೆಗೆ ಮಾತ್ರ :)

ಸುಮಾ

ಶಿವಪ್ರಕಾಶ್ said...

'ನಾನೇನು ತಪ್ಪು ಮಾಡಿದೆ...?' ಎಂದು ಕೇಳಿದರು ಉತ್ತರ ಕೊಡದೆ ಹೊರಟು ಹೋಗುವರು...
ಕೊನೆಗೆ 'ನಾನೇನು ತಪ್ಪು ಮಾಡಿದೆ..?' ಎಂದು ನಾವು ಮನದೆಲ್ಲೆ ನೊಂದುಕೊಳ್ಳುವುದು..
ನಿಮ್ಮ ಕವನ ಅದನ್ನು ಚನ್ನಾಗಿ ಬಿಂಬಿಸಿದೆ..

Snow White said...

ಶಿವಪ್ರಕಾಶ್ ಅವರೇ ,
ನಿಮ್ಮ ಮಾತುಗಳನ್ನು ನಾನು ನಿಜಕ್ಕೂ ಒಪ್ಪುತ್ತೀನಿ ... ನಿಮ್ಮ ಮಾತುಗಳಿಗೆ ಧನ್ಯವಾದಗಳು ...ಯಾವಾಗಲು ಬರುತ್ತಾ ಇರಿ :)

ಸುಮಾ

ಚುಕ್ಕಿಚಿತ್ತಾರ said...

ಕವನ ಚೆನ್ನಾಗಿದೆ. ಮು೦ದುವರೆಸಿ....

Snow White said...

ಚುಕ್ಕಿ ಚಿತ್ತಾರ ಅವರೇ,
ತುಂಬ ಧನ್ಯವಾದಗಳು..ನನ್ನ ಬ್ಲಾಗ್ಗೆ ಸ್ವಾಗತ ..ಯಾವಾಗಲು ಬರುತ್ತಾ ಇರಿ
ಸುಮಾ

Guruprasad said...

ಸುಮಾ,
ಒಳ್ಳೆಯ ಕವನ,, ಕೆಲವೊಂದು ಸರಿ,, ಇಂತಹ ಪ್ರಶ್ನೆಗಳನ್ನು ನಾವೇ ಕೇಳಿಕೊಂಡರು,,ಉತ್ತರ ಸಿಗುವುದಿಲ್ಲ....ಬಿಟ್ಟು ಹೋದವರು ಉತ್ತರ .... ಕೊಡೋದಿಲ್ಲ ಅಲ್ವ

ಜಲನಯನ said...

ತೊರೆದವರ ತೆರೆದಮನ ಓದಲಾಗದಿದ್ದರೆ ಬಹಳ ತೊಂದರೆಯಾಗುತ್ತೆ ಮನಕ್ಕೆ ಎನ್ನುವುದನ್ನು ಕವಿತೆ ಮಾಧ್ಯಮ...ಸೂಪರ್ ಸೆಲೆಕ್ಷನ್....