December 30, 2009



ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ ..
ಸಿಕ್ಕರು ಬಾಳ ದಾರಿಯಲಿ ಎಷ್ಟೊಂದು ಮಿತ್ರರು ..
ಮನದಿಂದ ದೂರದವರು ಕೇವಲ ಒಬ್ಬರೋ ಇಬ್ಬರೋ ..
ತಂದಿರುವೆ ನೀ ನನಗೆ ಸಾಕಷ್ಟು ನೆಮ್ಮದಿ ಪ್ರೀತಿ ..
ಓಡಿಸಿರುವೆ ಬಹು ದೂರಕೆ ನೋವು ದುಃಖ ಭೀತಿ ..
ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ .. :)


ಇದನ್ನು ನಾನು ಬರೆದಾಗ ಇನ್ನೂ ನಾವು ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿರಲ್ಲಿಲ್ಲ....

December 21, 2009

ಕವಲು ದಾರಿ



ಬಾಳಲ್ಲಿ ಸಿಗುವುದು ನೂರಾರು ಕವಲು ದಾರಿಗಳು ..
ಎತ್ತ ನಡೆದರೆ ಸರಿ..
ತಿಳಿದವರು ಯಾರು ?
ಪ್ರತಿ ದಾರಿಯಲು ಸಿಗುವರು ಬಗೆ ಬಗೆಯ ಜನರು
ಯಾರು ನಮ್ಮವರು ಎಂದು ಬಲ್ಲವರಾರು.. ?
ನಡೆವ ದಾರಿ ಹಸಿರಾಗಲಿ ಎಂದು ಬಯಸುವಾ...
ಸಿಗುವ ಮಂದಿ ನಮ್ಮ ಜೊತೆಯಾಗಲಿ ಎಂದು ಹರಸುವಾ...

December 17, 2009

ಜೇಡರ ಬಲೆ





ಬಂದಿಯಾಗಿರುವೆ ಈ ಬಲೆಯಲ್ಲಿ..
ಎತ್ತ ನೋಡಿದರು ಕಾಣದು ಹೊರಬರುವ ದಾರಿ..
ಜೇಡರ ಬಲೆಯೇ ನಾ ಸಿಕ್ಕಿ ಬಿದ್ದಿದಾದರು ಹೇಗೆ ಇಲ್ಲಿ ?
ಬಿಟ್ಟು ಬಿಡು ನನ್ನನ್ನು ....
ಬಾಳಬೇಕಾಗಿದೆ ನಾನು .. !!
ಯಾವುದೀ ಬಲೆ ಎಂದು ಗೊತ್ತೇ ನಿಮಗೆ..?
ನಮ್ಮ ಸುತ್ತ ಇರುವ ಕಾಣದ ಬಲೆಗಲಿವು ..!!
ಬಿಟ್ಟು ಬಿಡಿ ನನ್ನನ್ನು ..
ಬದುಕಬೇಕಾಗಿದೆ ನಾನು ..!!



December 12, 2009



ಎತ್ತ ನೋಡಿದರತ್ತ ಮಂಜು ಮುಸುಕಿದೆ ..
ಸುತ್ತ ಮುತ್ತಲು ಕಾಡು ಹರಡಿದೆ ..
ನಡೆಯಲು ದಾರಿ ಒಂದು ಕಣ್ಣ ಮುಂದಿದೆ ..
ಮುಂದೆ ಹೋಗಲೋ ಗೆಳೆಯ ,ಇಲ್ಲ ನಿನ್ನ ಕಾಯಲೋ ?..

December 2, 2009

ಸುರಿವ ಮಂಜಲಿ ..



ಸುರಿವ ಮಂಜಲಿ ..
ಕೊರೆವ ಚಳಿಯಲ್ಲಿ ..
ಜಗವೇ ಮಲಗಿದಂತಿದೆ ..
ತಿಳಿಯ ನೀರಲ್ಲಿ ..
ಸುರಿವ ಹಿಮದಲ್ಲಿ ..
ಮನವು ಮಿಂದಿದೆ ..
ಎಲ್ಲಿ ನೋಡಿದರಲ್ಲಿ ಹಿಮದ ರಾಶಿ ಕಂಡಿದೆ ..
ಪ್ರಕೃತಿಯೇ ನಿನ್ನ ಚೆಲುವ ನೋಡಲು ಎರಡು ಕಣ್ಣು ಸಾಲದೇ ..!!

ಯಾಕಾಗಿ ಬಂದೆ ನಾ ಇಲ್ಲಿಗೆ ?




ಬಿಟ್ಟು ಬಂದೆ ನಾ ನನ್ನ ಜನರನ್ನು ..

ಬಿಟ್ಟು ಬಂದೆ ನಾ ನನ್ನ ಕನಸನ್ನು ..

ಬಿಟ್ಟು ಬಂದಿರುವೆ ನನ್ನ ಸವಿ ನೆನಪುಗಳನ್ನು ..

ಬಿಟ್ಟು ಬಂದಿರುವೆ ನಾ ನನ್ನನ್ನು , ನನ್ನ ಮನವನ್ನು !!

ಯಾಕಾಗಿ ಬಂದೆ ನಾ ಇಲ್ಲಿಗೆ ?

ನೆಚ್ಚಿ ಬಂದಿರುವೆ ಏನ್ನನ್ನು ಈ ನಾಡಿಗೆ ?

ನಾ ಬಂದಿರಬಹುದು ಇಲ್ಲಿ ಬಾಳುವ ಸಲುವಾಗಿ ,

ಯಾರಿಗಾಗಿ ಬಾಳಲ್ಲಿ ನಾ , ನೀ ಇರಲು ಅಲ್ಲಿ ಒಂಟಿಯಾಗಿ ?