October 28, 2009

ಹೆತ್ತವರು



ಬಾಲ್ಯದಲಿ ಜೊತೆಯಿದ್ದು ನಡೆಸುವರು ..

ಹರೆಯದಲ್ಲಿ ಸರಿ ದಾರಿ ತಿಳಿಸುವರು ..

ಮುಪ್ಪಲ್ಲಿ ನಮ್ಮ ದಾರಿ ಕಾಯುವರು ..

ಇರುವರು ಸದಾ ನಮ್ಮ ಜೊತೆಯಾಗಿ ,

ಬರುವರು ಹಿಂದೆ ನೆರಳಾಗಿ ..

ಕಣ್ಣಿಗೆ ಕಾಣುವ ದೇವರಿವರು ,

ಇವರೇ ನಮ್ಮ ಹೆತ್ತವರು !! :)

October 22, 2009

ನನ್ನ ಗೆಳೆಯ


ನಗುತಿರಲು ನೀ ನನ್ನ ಗೆಳೆಯ , ನಾ ನಗುವೇ ..

ದುಃಖ ತುಂಬಿರಲು ನಿನ್ನೆದೆಯ , ನಾ ಕಂಬನಿ ಮಿಡಿವೆ ..

ಸದಾ ಆಶಿಸುವೆ ನಾ ನಿನ್ನ ಗೆಲುವು ..

ಬೇಡವೇ ಬೇಡ ನಿನಗ್ಯಾವ ನೋವು ..

ತುಂಬಿರಲಿ ಸದಾ ಹರುಷ ನಿನ್ನ ಬದುಕಿನಲ್ಲಿ ..

ಬೆಳಗಿರಲಿ ನಗೆ ದೀಪ ನಿನ್ನ ಮನಸಿನಲ್ಲಿ :) :)

October 19, 2009

ರಾತ್ರಿ


ಬಾನಲ್ಲಿ ನಗುವ ಚಂದಿರನ ಕಂಡು ,

ನಾವೇನು ಕಮ್ಮಿ ಎನ್ನುವಂತಿದೆ ಈ ಅಲೆಗಳ ದಂಡು ..

ಚಂದ್ರಮನ ತಂಪು ನೋಟದ ಜೊತೆ ಜೊತೆಗೆ ,

ನಮಗಿದೋ ಈ ಅಲೆಗೆಳ ಇಂಪು ನಿನಾದದ ಕೊಡುಗೆ ..

ಈ ಸೊಬಗ ನೋಡುತಿರಲು ಕಣ್ಣತುಂಬಿ ಬಂದಿದೆ ,

ನಿಸರ್ಗವೇ ನಿನ್ನ ನ್ಯಜತೆಯೇ ಕಣ್ಣೆದುರು ಕಲೆಯಾಗಿ ನಿಂತಿದೆ !!

October 17, 2009

ಬೆಳಕಿನ ಹಬ್ಬ



ಬೆಳಕಿನ ಹಬ್ಬಕ್ಕೆ ಕೋರುವ ಸ್ವಾಗತ


ಬೆಳಗುವ ದೀಪಗಳನು ದೇವರಿಗೆ ತಲೆಬಾಗುತ ..


ನಮ್ಮನು ತುಂಬಲಿ ದೀಪಗಳ ಬೆಳಕು ..


ಬಾಳಲಿ ತರಲಿ ಅದು ಬಂಗಾರದ ಫಲುಕು ..


ಹೊಸ ಬಟ್ಟೆಗಳ ಜೊತೆ ಹೊಸ ಭಾವಗಳು ನಮಗಿರಲಿ ..


ಈ ಹಬ್ಬ ಸಂತಸ ತರುವ ದೀವಿಗೆಯಾಗಲಿ :) :)

October 14, 2009

ಗೆಳೆತನ



ಜೊತೆಗೆ ಸಾಗುವಾಗ ನಾವು ,
ನಮಗೇಕೆ ಕಲ್ಲು ಮುಳ್ಳಿನ ಚಿಂತೆ ..
ಒಂದಾಗಿ ನಡೆವಾಗ ನಾವು ,
ಈ ದಾರಿಯೇ ಶುಭ ಕೋರುವುದಂತೆ !! :) 

October 11, 2009

ನಿನ್ನ ನೆನಪು



ತಂಪು ತಂಗಾಳಿಯಲಿ ನಿನ್ನದೇ ನೆನಪು ..


ಸುರಿವ ಜಟಿ ಮಳೆಯಲ್ಲಿ ನಿನ್ನದೇ ಕನಸು ..


ಎಲ್ಲಿ ಕಾಣಲಲ್ಲಿ ನಿನ್ನದೇ ಸವಿ ನಗುವು ..


ನನ್ನ ಸೆಳೆಯುತಿದೆ ನಲ್ಲ , ನಿನ್ನ ಸಿರಿ ಒಲವು !!

October 9, 2009

ಉಯ್ಯಾಲೆ


ಜೀವನವೇ ಒಂದು ಉಯ್ಯಾಲೆಯ ರೀತಿ ..
ಒಮ್ಮೆ ಮೇಲೆ , ಒಮ್ಮೆ ಕೆಳಗೆ ..
ಮೇಲೇರುವಾಗ ಆಕಾಶವೇ ತೋಳಲಿ ,
ಕೆಳಗಿಳಿಯುವಾಗ ನೂರಾರು ನೋವು ಕಣ್ಣಲಿ ..
ಆಟದಲ್ಲುಂಟು ಸೋಲು ಗೆಲುವು..
ಬಾಳಿನಲ್ಲೂ ಉಂಟು ಸಂತೋಷದ ನಲಿವು ಗೆಲುವು :) :)

October 7, 2009

ನನ್ನ ಪ್ರೀತಿಯ ಗೂಡು




ಪ್ರೀತಿಯ ಗೂಡಿಗೆ , ನಾನೇ ತಳಿರು ತೋರಣ ..
ಮನೆಯ ಗುಡಿಗೆ , ನೀನೆ ಸಿಹಿ ಹೂರಣ ..
ನೀ ಇರಲು ಜೊತೆಯಲ್ಲಿ , ಮನೆಯೇ ಅರಮನೆಯಂತೆ ..
ನಮಗೇಕೆ ಬೇಕು ಲೋಕದ ಅಂತೆ ಕಂತೆ !! :)

October 5, 2009

ಕಡಲು


ಕಾಣದ ಕಡಲಿಗೆ ಹಂಬಲಿಸಿದೆ ಮನ ..
ಕಡಲ ಒಡಲಲ್ಲಿ ಏನು ಇರುವುದೋ ಕಾಣೆನಲ್ಲ ?
ಇರಬಹುದು ಮುತ್ತು ,ಇರಬಹುದು ಸಾವಿನ ಕುತ್ತು ..
ಆದರೆ ಇವೆಲ್ಲ ತಿಳಿವುದೇ , ಈ ಪೆದ್ದು ಮನಕೆ , ಅದರೊಳಗಿನ ಮುದ್ದು ಆಸೆಗೆ !!

October 3, 2009

ಇರುಳು







ಇರುಳು ಸುತ್ತಲು ಮುತ್ತಿದೆ ..



ತಂಗಾಳಿ ಮೆಲ್ಲನೆ ಬೀಸಿದೆ ..



ಕನಸಿನ ದೋಣಿಯನು ಏರಲು , ಇಗೋ ಈ ಕಣ್ಣುಗಳು ಕಾದಿವೆ ..



ಇನ್ನೇನು ಹೊರಟಿದೆ ಇದರ ಪಯಣ ..



ಸವಿಗನಸುಗಳು ಕಣ್ಣು ತುಂಬಲಿ ಎಂದು ಹರಸೋಣ :)

October 2, 2009

ಸಂಬಂಧಗಳು


ನಗುವಾಗ ಬಂಧುಗಳು ..
ನಲಿವಾಗ ಸಂಬಂಧಗಳು ..
ಧರೆಯೆ ನಾಕವಂತೆ ..
ಭುವಿಯೇ ಸ್ವರ್ಗದಂತೆ .. :)
ಜೊತೆ ಇರಲು ನಾವು ಒಂದಾಗಿ ..
ಯಾರು ನಿಲ್ಲಬಲ್ಲರು ಎದುರಾಗಿ ? :) :)

October 1, 2009

ಬೆಳಕು


ಬೆಳಕೆಂದರೆ ಹೊಸ ದಿನದ ಆರಂಭ ..


ಹೊಸ ಜೀವನದ ಪ್ರಾರಂಭ ..


ಇದ್ದರೆ ಸಾಲದು ಬರಿ ಬೆಳಕು ಹೊರಗೆ ..


ಬೆಳಗಲೆ ಬೇಕು ಅದು ನಮ್ಮಿ ಹೃದಯದೊಳಗೆ .. :)


ಬೆಳಗಲಿ ಜಗವೆಲ್ಲ ಈ ಬೆಳಕಲಿ ..


ತುಂಬಲಿ ಸುಖ ಸಂತೋಷ ಮನದಲಿ :) :)