ಹಲವು ಸಲ ಮಾತಿಗಿಂತ ಮೌನವೇ ಆಪ್ತ ..
ಮಾತಿನಲ್ಲಿ ಹೇಳಲಾಗದ ನೂರು ಭಾವಗಳಿಗೆ ಮೌನವೇ ಸೂಕ್ತ ..
ಒಂಟಿತನವನ್ನು ಅಪ್ಪಿಕೊಂಡ ಮನಕೆ..
ಮಾತಿನ ಹಂಗೇಕೆ ?
ಮಾತಿನ ಮೋಡಿ ಅರಿತವರೆ ಆದರು ನಾವೆಲ್ಲರೂ..
ಮೌನ ತರುವ ನೆಮ್ಮದಿಯ ಸುಖವ ಬೇಡವೆನ್ನುವವರಾರು ?
ಬಿರು ನುಡಿಯ ನೋವಿಗಿಂತ ..
ನಸುನಗುವ ಚೆಲುವು ಚಂದವಲ್ಲವೇ ..?
ದುಡುಕಿ ನುಡಿವ ಒರಟು ನುಡಿಗಳಿಗಿಂತ..
ಕ್ಷಮೆ ಕೇಳುವ ಕಣ್ಣ ಸನ್ನೆ ಒಳಿತಲ್ಲವೇ ?
ಮಾತಾಡಲು ಏನು ಇರದಿರುವಾಗ ,ಮೌನವೇ ನೀನೆ ನಮ್ಮ ಆತ್ಮೀಯ ಗೆಳೆಯ..
ತಿಳಿಯದೆ ಮಾತಾಡಿ ಒಡೆದ ಮನಸನ್ನು ಒಂದು ಮಾಡಲು,
ಮೌನವೇ ನೀ ಇರಲೇಬೇಕು ನಮ್ಮ ಸನಿಹ..