May 17, 2010



ಅಳುಕದು ಮೂಡಿ ಮನದಲಿ ..
ತಳಮಳ ತಂದಿತು ಬದುಕಲಿ ..
ಬಳಿ ಇರಲು ನೀನು, ನಾ ಏಕೆ ಭಯಪಡಬೇಕೆಂದುಕೊಂಡರೆ..
ನಿನ್ನ ರೂಪದಲ್ಲೇ ಎದುರಾಗಬೇಕೆ ತೊಂದರೆ ? ?

ನೀ ಎಷ್ಟು ಸಾಂತ್ವಾನ ಹೇಳಿದರು ,
ಒಪ್ಪಲೊಲ್ಲದು ಈ ಮನಸೇಕೋ ..
ಒಡೆದ ಕನ್ನಡಿಯ ಜೋಡಿಸಬಲ್ಲೆ ,
ಎನ್ನುವ ಈ ಹುಚ್ಚು ಛಲವೇಕೋ ??
ಬಂದದ್ದು ಬರಲಿ ಬಿಡು ನಾ ಎದುರಿಸುವೆ ಒಬ್ಬಂಟಿಯಾಗಿ ..
ನೀ ಇದ್ದರು ಇರದಿದ್ದರೂ ನನ್ನ ಜೊತೆಯಾಗಿ ..

ಹೋಗಲಿ ಬಿಡು ಕ್ಷಮಿಸುವೆ ನಾ ನಿನ್ನ ಸಣ್ಣ ತಪ್ಪನ್ನು..
ಕಣ್ಣಾರೆ ನೋಡಲಾರೆ ನಾ ನಿನ್ನ ನೋವನ್ನು..
ಹೇಳಿದಷ್ಟು ಸುಲಭವಲ್ಲ ಅಲ್ಲವೇ ಗೆಳೆಯ ನಿಜ ಸ್ನೇಹವ ತೊರೆಯಲು..
ಕಾಡುವುದು ಅದರ ಸವಿ ನೆನಪು ನಮ್ಮನ್ನು ಹಗಲಿರುಳು :) :)










14 comments:

Subrahmanya said...

ಸಣ್ಣ ತಪ್ಪನ್ನು ಕ್ಷಮಿಸಿಬಿಡುವ ನಿಮ್ಮ ಕವನದ ಆಶಯ ಚೆನ್ನಾಗಿದೆ, ಅಂತಯೇ ಕವನವೂ ಕೂಡ.

ಜಲನಯನ said...

ಸುಮ ನಿಮ್ಮ ಕವನದ ಶೈಲಿ ವಿಭಿನ್ನ ಮತ್ತು ಒಳ್ಲೆಯ ಕಲ್ಪನೆ..ತಪ್ಪನ್ನು ಕ್ಷಮಿಸುವುದು ನಮ್ಮ ಹಿರಿತನ ಅಂತೆಯೇ ಅದನ್ನು ಅರಿತು ತಿದ್ದಿಕೊಂಡು ಎಚ್ಚೆತ್ತುಕೊಳ್ಳುವುದು ಕ್ಷಮಾದಾನ ಪಡೆದವನ/ಳ ವಿವೇಕ..ಅಲ್ಲವೇ...ಚನ್ನಾಗಿದೆ...

Raghu said...

ನೆನಪು...ಸಾಲುಗಳು ತುಂಬಾ ಚೆನ್ನಾಗಿವೆ...ತಪ್ಪನ್ನು ಕ್ಷಮಿಸೋದು ಒಳ್ಳೆಯ ಗುಣ...
ನಿಮ್ಮವ,
ರಾಘು.

ಮನಸು said...

tumba chennagide oLLeya guNavanne rooDisikondiddeeri...

ಮನಸಿನಮನೆಯವನು said...

Snow White ,

ಚೆನ್ನಾಗಿದೆ.. ನೆನಪಹನಿಗಳು ಹಾಗೆಯೆ ತಾನೇ..

ಸವಿಗನಸು said...

ಕ್ಷಮಿಸುವ ನಿಮ್ಮ ಕವನದ ಆಶಯ ಬಹಳ ಚೆನ್ನಾಗಿದೆ

shridhar said...

chennagide..

ಸೀತಾರಾಮ. ಕೆ. / SITARAM.K said...

nice one!
i liked your spirit to make up the broken mirror!!!

ದೀಪಸ್ಮಿತಾ said...

ಕವನದ ಆಶಯ ಚೆನಾಗಿದೆ

ವಾಣಿಶ್ರೀ ಭಟ್ said...

snehadalli kshame emba maatiddare sneha shashvata vaaguttade.. good writing

pls visit

www.vanishrihs.blogspot.com

Creativity said...

bahala acchu mecchi na kavana. suma, nanna hosa kannada blog illidhe. http://gadhyapadhya.blogspot.com/

Unknown said...

Chennaagide!!

Snow White said...

anisikegallanu tilisida ellarigu nanna vandanegalu :)
yavagalu barutta iri :)

Snow White said...

nimma ellara blogige baralu samayada abavadinda sadhyavagutilla..ee baari kandita baralu praytinusuttene..nimma kshame irali..

Suma