ಮನದಾಸೆಯ ಸುಮಕೆ,ಒಲವಿನ ನೀರೆರದವ..
ಅದು ಅರಳಿ ನಿಂತಾಗ ,ಕಾಲಲ್ಲಿ ಹೊಸಕಿ ಹೋದವ ..
ಬದುಕೆಂಬ ದೋಣಿಗೆ ನಾವಿಕನಾಗಿ ಇದ್ದವ ..
ನೀರ ಸೆಳವು ಜೋರಾದಾಗ ,ಒಂಟಿಯಾಗಿ ಬಿಟ್ಟು ನೀರಿಗೆ ಹಾರಿದವ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?
ನೂರೆಂಟು ಆಸೆಗಳ ಮನದೆ ತುಂಬಿ ..
ಅದು ನನಸಾಗುವ ಕಾಲಕೆ ಕಾಣದಂತೆ ಮಾಯವಾದವ ..
ಮತ್ತೆ ಬರುವೆನೆಂಬ ಹುಸಿ ಭರವಸೆಯ ಮನದೆ ನೆಟ್ಟು ..
ನಿನ್ನದೇ ನೆನಪಲಿ ಕೊರಗುವಂತೆ ಮಾಡಿದ ಇನಿಯ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?
ಎಂದು ಬರುವೆಯೋ ನೀನು ,ಕಾದು ಕುಳಿತಿಯೇ ನಾನು ..
ಬಂದಾಗ ಹೇಳದೆ ಹೋಗಬೇಡ..
ಇರದಿದ್ದರೂ ನೀ ನನ್ನ ಜೊತೆಗೆ ..
ಬರದಿದ್ದರು ಮನದ ಮನೆಗೆ ..
ಕಾಣಿಸಿ ಹೋಗು ನಲ್ಲ ಒಮ್ಮೆ ನನಗೆ ..
ಅತ್ತು ಚೀರುವುದಿಲ್ಲ ,ನಿನ್ನ ತಡೆಯುವುದಿಲ್ಲ ..
ತೊಡಕಾಗಿ ನಿಲ್ಲೇ ನಾ , ನಿನ್ನ ದಾರಿಗೆ ..
ಸುಮ್ಮನೆ ನೋಡುವೆನು ,ಶುಭ ಕೋರಿ ಕಳಿಸುವೇನು..
ತಿರುಗಿ ನೋಡೆನು ಗೆಳೆಯ ನಿನ್ನ ಕಡೆಗೆ.