November 28, 2010



ಸೋನೆ ಮಳೆಯಲ್ಲಿ ನಿನ್ನ ಕಣ್ಣ ಸನ್ನೆಯದೇ ನೆನಪು ..
ಸೋಕುವ ತಂಗಾಳಿಯಲಿ ನಿನ್ನದೇ ಸುಂದರ ಕನಸು ..
ಸುತ್ತಮುತ್ತಲು ತುಂಬಿರುವ ಮಬ್ಬುಗತ್ತಲ್ಲಲ್ಲಿ ,ನಿನ್ನ ಬೆಚ್ಚನೆ ಒಲವಿನದೇ ಚಿಂತೆ ..
ಮಳೆಯ ಹನಿಗಳ ಬಿಂದುವಲ್ಲಿಯು ಕಾಣುತಿರುವುದು, ನಿನ್ನದೇ ಪ್ರತಿಬಿಂಬವಂತೆ..
ಪಾವನವಾಯಿತು ಪ್ರಕೃತಿ, ಮಳೆ ನೀರಲ್ಲಿ ತೋಯ್ದು ..
ನೂತನವಾಯಿತು ಮನವು , ನಿನ್ನ ನೆನಪಿನ ಹನಿಯಲ್ಲಿ ನೆನೆದು :) :)










November 14, 2010



ಮನದ ಭಾವಗಳಿಗೆ ನದಿಯೊಂದು ಬೇಕಿದೆ..
ಆ ನದಿ ಹರಿದು ಗೆಳೆಯನ ಮನ ಸೇರಬೇಕಿದೆ ..
ಕಲ್ಲು ಹೃದಯವ ಕರಗಿಸಬೇಕಿದೆ..
ಸ್ನೇಹದ ಸುಮವ ಅರಳಿಸಬೇಕಿದೆ ..

ಅಪನಂಬಿಕೆಯ ಕಳೆ ತೆಗೆದು..
ಅಕ್ಕರೆಯ ನೀರೆರೆದು..
ಅದ ಕಾಪಾಡುವ ಹೊಣೆ ನನ್ನದೇ ಆಗಿದೆ..

ಹೂವು ಅರಳಿ ಪರಿಮಳವ ಚೆಲ್ಲಿದಾಗ,
ಗೆಳೆಯನ ಕಣ್ಣಲಿ ಸಂತಸವದು ಮಿಂಚಿದಾಗ,
ನಾ ಕಂಡ ಕನಸೆಲ್ಲ ನನಸಾಗದೇ ಆಗ..
ನಾ ಕಂಡ ಕನಸೆಲ್ಲ ನನಸಾಗದೇ ಬೇಗ ? :) :)


ತುಂಬಾ ಕೆಲಸವಿದ್ದ ಕಾರಣ ಗೆಳೆಯರ ಬ್ಲಾಗ್ ಗಳಿಗೆ ಭೇಟಿನೀಡಲು ಆಗಲಿಲ್ಲ ..ನಿಮ್ಮ ಸಹಕಾರ ಹೀಗೆ ಇರಲಿ.