October 10, 2010



ಸಾಗರದ ಅಲೆ ನಾನು ..
ತಂಪು ತಂಗಾಳಿಯ ಗೆಳತಿಯು ..
ನಾವಿಬ್ಬರು ಕೂಡಿ ಆಡುತಿರಲು ,ಹುಣ್ಣಿಮೆಯ ಚಂದ್ರನಿಗೂ ಮುನಿಸು ..
ನಮ್ಮೊಡನೆ ಸೇರಲು ಪಾಪ ಅವನಿಗೂ ಮನಸು ..
ಸೇರಿಸಿಕೊಂಡು ಅವನನ್ನು ,ಆಡಲು ಹೊರಟರೆ ನಾವು ,ಚುಕ್ಕಿಗಳ ಕಣ್ಣಲಿ ನೀರು ..
ಎಲ್ಲರನ್ನು ಒಂದುಗೂಡಿಸಿ ,ಎಲ್ಲರ ಮನವೊಲಿಸಿ ಆಟ ಶುರು ಮಾಡುವುದರೊಳಗೆ,
ನಿಶೆಯು ಹೊರಟಿತು ತಾ ಮನೆಗೆ ,
ಕೊನೆಯಾಯ್ತು ಮೊದಲಾಗದ ಆಟ ಅಲ್ಲಿಗೆ !!


October 3, 2010

ಮನದ ನೂರು ಭಾವಕೆ ಅರ್ಥ ಹುಡುಕಲು ಹೋಗಿ ಮನ ತೊಳಲಾಡಿದೆ..
ಯಾವುದು ಸರಿಯೋ ಯಾವುದು ತಪ್ಪೋ ತಾ ಅರಿಯದೆ ಕೊರಗಿದೆ..
ಸರಿ ಇದ್ದರು ಆಡಿದ ಮಾತು, ಹೇಳಿದ ರೀತಿ ತಪ್ಪಾದರೆ ,ನೋವೆಂಬುದು ತಪ್ಪಿದಲ್ಲ..
ಎಷ್ಟು ಕಾಡಿ ಬೇಡಿದರು,ಎಷ್ಟು ಕ್ಷಮೆ ಕೇಳಿದರು,ಕಲ್ಲಾದ ಮನವು ಕರಗದಲ್ಲ..

ಏನು ಮಾಡಲಿ ನಾನು,ನಿನ್ನ ನೋಯಿಸಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ..
ಕಾಲನ ಆಟಕೆ ,ಬದುಕು ಕಲಿಸುವ ಪಾಠಕೆ ಯಾರನು ದೂರುವುದು ತರವಲ್ಲ..
ಒಮ್ಮೊಮ್ಮೆ ಅನಿಸುವುದು ಬದುಕೆಷ್ಟು ಕ್ಲಿಷ್ಟವು ಭಾವನೆಗಳಿಂದ..
ಆದರೆ ಮರು ಕ್ಷಣ ಮನ ನುಡಿವುದು ಭಾವಗಳಿರದೆ ಬದುಕೆಂಬುದಿಲ್ಲ, ಮರುಳೆ ಬದುಕೆಂಬುದಿಲ್ಲ !!


September 25, 2010



ಯಾರಿರಬಹುದು ಜೊತೆಯಲ್ಲಿ ನಮಗಾಗಿ ಅನುದಿನ ಅನುಕ್ಷಣ ..?
ತಂದೆ ತಾಯಿ , ಅಣ್ಣ ತಮ್ಮಂದಿರು , ಅಕ್ಕ ತಂಗಿಯರು , ಬಂಧುಗಳು , ಬಾಳ ಸಂಗಾತಿ ?
ಯಾರು ಇರಲಾರರು ಅನುಗಾಲ ಅಲ್ಲವೇ ?

ಇದಕೆಲ್ಲ ಮಿಗಿಲಾದ ಬಂಧವುಂಟು ,ಕ್ಷಣ ಕಾಲ ಅಗಲದ ಬಂಧುವುಂಟು..
ಅದರ ಹೆಸರೇ ಗೆಳೆತನ,ಅವರೇ ನಮ್ಮ ನಲ್ಮೆಯ ಗೆಳೆಯರು..

ಬಾಲ್ಯದ ಗೆಳತಿ, ಬದುಕಿನ ಜೊತೆಗಾತಿ ಆಗಬಲ್ಲಳು..
ಅಕ್ಕ- ತಂಗಿ ಏಕೆ ತಾಯಿ ಕೂಡ ಆಗಬಲ್ಲಳು ..
ಅದೇ ರೀತಿ ಗೆಳೆಯ ,ಅಣ್ಣನು-ತಮ್ಮನು ,ಗುರುವು ಅಲ್ಲದೆ ,
ಸಿಟ್ಟಾದಾಗ ಬಿಸಿ ತುಪ್ಪವು ಆಗಬಲ್ಲನು.. :)


ಏನಾದರೇನು ಏನೋದರೇನು..?
ಬೇಕು ನನಗೆ ನನ್ನ ಗೆಳೆಯರು ಗೆಳೆಯರಾಗಿಯೇ ಮರು ಜನ್ಮದಲ್ಲೂ ..
ಎಲ್ಲ ಬಂಧಕ್ಕಿಂತ, ಸ್ನೇಹ ಬಂಧವೇ ಹೆಚ್ಚು ನನಗೆ ಇಹ-ಪರದಲ್ಲೂ :) :)

ಇದರ ಅರ್ಥ ಬೇರೆ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲವೆಂದಲ್ಲ..
ಸಂಬಂಧಗಳಲ್ಲಿ ಗೆಳೆತನವು ಕೂಡಿದ್ದರೆ , ಅದು ತರುವ ಖುಷಿಗೆ ಸರಿಸಾಟಿಯೇ ಇಲ್ಲ :) :)






September 5, 2010



ಯಾರ ಮನದಲಿ ಏನುಂಟು ಬಲ್ಲವರಾರು ..
ನಗುವ ಮೊಗದಲಡಗಿರುವ ಭಾವ ಕಂಡವರಾರು ..
ಬರಿ ಮೇಲ್ನೋಟಕೆ ಸರಿ ಇದ್ದಾರೆ ಸಾಕೆ ಜನರು ..
ನಿಜ ಬಣ್ಣ ತಿಳಿದಾಗ ಅಪರಿಚಿತರಾಗರೇ ಅವರು ..


ಯಾರು ಹಿತವರು ನನಗೆ ಎಂದು ತಿಳಿಯ ಬಯಸಿದೆ ಮನ..
ತಿಳಿಯಲೆತ್ನಿಸಿ ತಾ ಸೋತು ಮರುಗಿದೆ ದಿನ..
ಇರುವರು ಗೆಳೆಯರು ಮನದಲಿ ಜೋಪಾನವಾಗಿ ..
ಆದರೆ ಕೆಲವು ದಾರಿಯಲಿ ನಮಗೆ ನಾವೇ ಅಲ್ಲವೇ ಇರಬಹುದು ಜೊತೆಯಾಗಿ ? :) :)