July 18, 2010



ಸ್ನೇಹವೆಂಬ ಕಡಲ ಆಳ ಅಳೆಯುವುದೆಂದರೆ ..
ಬಾನ ಚುಕ್ಕಿಗಳ ಲೆಕ್ಕವಿಟ್ಟಂತೆ..
ಅಂಕೆಗೆ ಸಿಗದು ,ಶಂಕೆಗೆ ಜಾಗವಿರದು ..
ಸ್ನೇಹದಲ್ಲಿ ಯಾವುದೇ ಇತಿ -ಮಿತಿಗಳಿರುವುದಿಲ್ಲ..
ಸ್ನೇಹಿತರ ಕಾಳಜಿಗೆ ಯಾವುದೇ ಅಳತೆ -ಮಾಪನಗಳಿರುವುದಿಲ್ಲ ..
ದೂರವೆಷ್ಟೇ ಇದ್ದರು ,ಮಾತಾಡಿ ಎಷ್ಟೋ ದಿನಗಳಾಗಿದ್ದರು ..
ಮತ್ತೆ ಸಿಕ್ಕಾಗ ಅದೇ ಕಕ್ಕುಲತೆ ,ಅದೇ ಆತ್ಮೀಯತೆ ಇರುವುದು ..
ಕೇವಲ ಈ ಬಂಧದಲಿ , ಸ್ನೇಹ ಸಂಬಂಧದಲಿ :) :)





July 11, 2010

ನಂಬಿಕೆ



ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..
ನಂಬಿಕೆ ಎಂದರೆ ಒಬ್ಬರ ಮೇಲೆ ಮತ್ತೊಬ್ಬರಿಗಿರುವ ವಿಶ್ವಾಸ ಅಲ್ಲವೇ ?
ಬೇರೆಯವರ ಮೇಲೆ ನಮಗಿರುವ ನಂಬಿಕೆಗಿಂತ ,
ನಮ್ಮ ಮೇಲೆ ನಮಗಿರುವ ನಂಬಿಕೆ ದೊಡ್ಡದು ಅಲ್ಲವೇ ?
ಬಂಧಗಳಲ್ಲಿ ನಮಗಿರುವ ನಂಬಿಕೆಯ ಮೇಲೆ ಬಂಧುತ್ವ ಬೆಳೆಯುವುದು ಇಲ್ಲ ಅಳಿಯುವುದು ..
ನಂಬಿಕೆಯೇ ನಿನ್ನ ಗಳಿಸುವುದೆಷ್ಟು ಕಷ್ಟವೋ ,ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ ..
ಆದರೇನು ಮಾಡುವುದು ?
ನಂಬಿಕೆಯ ಮೇಲೆ ನಿಂತಿದೆ ಜಗವೆಲ್ಲ..
ನಂಬಿಕೆಯ ಎದುರುನೋಡುವರು ಜನರೆಲ್ಲಾ..!! :) :)







June 23, 2010



ಹಲವು
ಸಲ ಮಾತಿಗಿಂತ ಮೌನವೇ ಆಪ್ತ ..
ಮಾತಿನಲ್ಲಿ ಹೇಳಲಾಗದ ನೂರು ಭಾವಗಳಿಗೆ ಮೌನವೇ ಸೂಕ್ತ ..
ಒಂಟಿತನವನ್ನು ಅಪ್ಪಿಕೊಂಡ ಮನಕೆ..
ಮಾತಿನ ಹಂಗೇಕೆ ?

ಮಾತಿನ ಮೋಡಿ ಅರಿತವರೆ ಆದರು ನಾವೆಲ್ಲರೂ..
ಮೌನ ತರುವ ನೆಮ್ಮದಿಯ ಸುಖವ ಬೇಡವೆನ್ನುವವರಾರು ?
ಬಿರು ನುಡಿಯ ನೋವಿಗಿಂತ ..
ನಸುನಗುವ ಚೆಲುವು ಚಂದವಲ್ಲವೇ ..?
ದುಡುಕಿ ನುಡಿವ ಒರಟು ನುಡಿಗಳಿಗಿಂತ..
ಕ್ಷಮೆ ಕೇಳುವ ಕಣ್ಣ ಸನ್ನೆ ಒಳಿತಲ್ಲವೇ ?

ಮಾತಾಡಲು ಏನು ಇರದಿರುವಾಗ ,ಮೌನವೇ ನೀನೆ ನಮ್ಮ ಆತ್ಮೀಯ ಗೆಳೆಯ..
ತಿಳಿಯದೆ ಮಾತಾಡಿ ಒಡೆದ ಮನಸನ್ನು ಒಂದು ಮಾಡಲು,
ಮೌನವೇ ನೀ ಇರಲೇಬೇಕು ನಮ್ಮ ಸನಿಹ..







June 20, 2010



ಸ್ನೇಹವೆಂದರೆ ನಾಲ್ಕು ಸವಿ ಮಾತನಾಡಿ ಖುಷಿಪಡಿಸುವುದಷ್ಟೇ ಅಲ್ಲ ..
ನಗುವಾಗ ಜೊತೆಗಿದ್ದು , ದುಃಖ ಬಂದಾಗ ದೂರವಾಗುವುದಲ್ಲ ..
ಸ್ನೇಹಿತನ ಮನದ ಕಸಿವಿಸಿಯ ಅರಿತು ಅರಿಯದಂತೆ ನಟಿಸುವುದಲ್ಲ ..
ಕೆಲವೊಮ್ಮೆ ನೂರು ಮಾತಾಡಿ ಸಮಾಧಾನ ಮಾಡುವುದಕ್ಕಿಂತ ..
ಅವನ ಬಳಿಯಿದ್ದು ನಾನಿರುವೆ ನಿನ್ನ ಜೊತೆಯಾಗಿ ನಿನ್ನ ಎಲ್ಲ ಕಷ್ಟಗಳಲ್ಲಿ ಗೆಳೆಯ ಚಿಂತಿಸಬೇಡ ,
ಎಂಬ ನುಡಿಯು ತರುವ ಮನಸ್ಥ್ಯರ್ಯ ದೊಡ್ಡದಲ್ಲವೇ ..?