January 2, 2010



ನೀಡು ನಮಗೆ ಒಳ್ಳೆಯ ದಿನಗಳ ,
ನೀಡು ನಮಗೆ ಸುಖದ ಕ್ಷಣಗಳ ,
ತುಂಬಲಿ ಮನವೆಲ್ಲ ನಿನ್ನ ಆ ಮುಗುಳುನಗೆ ..
ತುಂಬಲಿ ಮನೆಯಲ್ಲ ನಿನ್ನ ಸುತ್ತ ಇರುವ ಆ ಹೂಗಳ ಪರಿಮಳ ..
ಹರಸು ನಮಗೆ ಓ ದೇವತೆಯೇ ನಿನ್ನ ಮನದಾಳದಿಂದ ..
ನಮದಾಗಲಿ ಈ ವರುಷ ನೂರೆಂಟು ಹರುಷ ಆನಂದ .. :)

ಎಲ್ಲ ಸ್ನೇಹಿತರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

December 30, 2009



ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ ..
ಸಿಕ್ಕರು ಬಾಳ ದಾರಿಯಲಿ ಎಷ್ಟೊಂದು ಮಿತ್ರರು ..
ಮನದಿಂದ ದೂರದವರು ಕೇವಲ ಒಬ್ಬರೋ ಇಬ್ಬರೋ ..
ತಂದಿರುವೆ ನೀ ನನಗೆ ಸಾಕಷ್ಟು ನೆಮ್ಮದಿ ಪ್ರೀತಿ ..
ಓಡಿಸಿರುವೆ ಬಹು ದೂರಕೆ ನೋವು ದುಃಖ ಭೀತಿ ..
ಧನ್ಯವಾದಗಳು ಈ ವರ್ಷಕೆ ,
ನೀ ತಂದ ನೂರೆಂಟು ಹರ್ಷಕೆ .. :)


ಇದನ್ನು ನಾನು ಬರೆದಾಗ ಇನ್ನೂ ನಾವು ಆ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿರಲ್ಲಿಲ್ಲ....

December 21, 2009

ಕವಲು ದಾರಿ



ಬಾಳಲ್ಲಿ ಸಿಗುವುದು ನೂರಾರು ಕವಲು ದಾರಿಗಳು ..
ಎತ್ತ ನಡೆದರೆ ಸರಿ..
ತಿಳಿದವರು ಯಾರು ?
ಪ್ರತಿ ದಾರಿಯಲು ಸಿಗುವರು ಬಗೆ ಬಗೆಯ ಜನರು
ಯಾರು ನಮ್ಮವರು ಎಂದು ಬಲ್ಲವರಾರು.. ?
ನಡೆವ ದಾರಿ ಹಸಿರಾಗಲಿ ಎಂದು ಬಯಸುವಾ...
ಸಿಗುವ ಮಂದಿ ನಮ್ಮ ಜೊತೆಯಾಗಲಿ ಎಂದು ಹರಸುವಾ...

December 17, 2009

ಜೇಡರ ಬಲೆ





ಬಂದಿಯಾಗಿರುವೆ ಈ ಬಲೆಯಲ್ಲಿ..
ಎತ್ತ ನೋಡಿದರು ಕಾಣದು ಹೊರಬರುವ ದಾರಿ..
ಜೇಡರ ಬಲೆಯೇ ನಾ ಸಿಕ್ಕಿ ಬಿದ್ದಿದಾದರು ಹೇಗೆ ಇಲ್ಲಿ ?
ಬಿಟ್ಟು ಬಿಡು ನನ್ನನ್ನು ....
ಬಾಳಬೇಕಾಗಿದೆ ನಾನು .. !!
ಯಾವುದೀ ಬಲೆ ಎಂದು ಗೊತ್ತೇ ನಿಮಗೆ..?
ನಮ್ಮ ಸುತ್ತ ಇರುವ ಕಾಣದ ಬಲೆಗಲಿವು ..!!
ಬಿಟ್ಟು ಬಿಡಿ ನನ್ನನ್ನು ..
ಬದುಕಬೇಕಾಗಿದೆ ನಾನು ..!!