ನಿನ್ನ ಏನೆಂದು ಕರೆಯಲಿ ನಿನ್ನ ಯಾರೆಂದು ತಿಳಿಯಲಿ ತಿಳಿಯದು ನನಗೇನು ನಿನ್ನ ವಿಷಯ ಆದರು ಮನದೊಳಗೆ ಇರುವೆ ನೀ ಗೆಳೆಯ ಕೆಲವೊಮ್ಮೆ ನಸು ನಗುವು,ಕೆಲವೊಮ್ಮೆ ಹುಸಿ ಮುನಿಸು ಯಾರಾದರೇನು ನೀ ಚೆನ್ನ ? ನೀ ಗೆಲ್ಲಬಲ್ಲೆಯೇನು ನನ್ನ !
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಇರುವಾಗ ಅದೇಕೆ? ಇರದಾಗ ಅದೇ ಬೇಕೆ .. ಸಿಗುವಾಗ ನಿಜ ಒಲುಮೆ ನಮಗಿಲ್ಲ ಅದರ ಚಿಂತೆ ತಿಳಿದಾಗ ಅದರ ಮಹಿಮೆ ಅದು ಸಿಗಲಾರದಂತೆ ಹಾಗೆಂದು ಜೀವನದಲ್ಲಿ ಸಿಗುವುದೆಲ್ಲ ನಿರಾಸೆಯಲ್ಲ ಒಳ್ಳೆಯ ದಿನಗಳು ನಮಗಾಗಿ ಕಾದಿದೆಯಲ್ಲ
ಸುಮ ಎಂದರೆ ಮೃದು ಸುಮ ಎಂದರೆ ಮುದ ಸುಮ ಎಂದರೆ ಅವಳೊಂದು ಜೀವ ಅವಳಲ್ಲೂ ಉಂಟೋ ನೂರಾರು ಭಾವ ಸುಮ ಇರಲೇ ಬೇಕಿಲ್ಲ ಯಾವಾಗಲು ಸುಮ್ಮನೆ ಅವಳಿಗೂ ಇರಬಹುದಲ್ಲ ನೂರೆಂಟು ಕಲ್ಪನೆ ಸುಮಾಳಿಗೆ ಬೇಕೀಗ ಎಲ್ಲರ ಸ್ನೇಹ ಅವಳು ಪೂರಯಿಸಲು ತನ್ನೆಲ್ಲ ಧ್ಯೇಯ